ಶಿಯೋಮಿ ಕಂಪನಿಯ ವಸ್ತುಗಳನ್ನು ಕಳೆದ ಐದು ವರ್ಷಗಳಿಂದ ಸಂಗ್ರಹ: ಇಂಡಿಯಾ ಬುಕ್ ಆಫ್ ರೇಕಾರ್ಡನಲ್ಲಿ ಸ್ಥಾನ ಪಡೆದ ಬಾಲಕ

ಶಿರಸಿ: ಶಿಯೋಮಿ ಕಂಪನಿಯ ವಸ್ತುಗಳನ್ನು ಕಳೆದ ಐದು ವರ್ಷಗಳಿಂದ ಸಂಗ್ರಹಿಸಿ ಯಥಾ ಸ್ಥಿತಿಯಲ್ಲಿ ಇಟ್ಟ ಬಾಲಕನೋರ್ವನಿಗೆ ಇಂಡಿಯಾ ಬುಕ್ ಆಫ್ ರೇಕಾರ್ಡನಲ್ಲಿ ಸ್ಥಾನ ಸಿಕ್ಕಿದೆ. ಸಿದ್ದಾಪುರ ತಾಲೂಕಿನ ಸರಕುಳಿಯ ಜಗದಂಬಾ ಪೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅಭಿರಾಮ ಮಹಾಬಲೇಶ್ವ ನಾಯ್ಕ ಎಂಬ ಬಾಲಕನೇ ಇಂಡಿಯಾ ಬುಕ್ ಆಫ್ ರೇಕಾರ್ಡನಲ್ಲಿ ಸ್ಥಾನ ಪಡೆದ ವಿದ್ಯಾರ್ಥಿ.

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ 60 ಜನರಿದ್ದ ಬಸ್ ಪಲ್ಟಿ: 18 ಮಂದಿಗೆ ಗಾಯ

ಈತ ಕಳೆದ ಐದು ವರ್ಷಗಳಿಂದ ಶಿಯೋಮಿ ಕಂಪನಿಯ ವಸ್ತುಗಳನ್ನು, ರ‍್ಯಾಪರ್ ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಟ್ಟ ಹಿನ್ನೆಲೆಯಲ್ಲಿ ಈ ಗೌರವ ಲಭಿಸಿದೆ. ಸರಕುಳಿಯ ಜಗದಂಬಾ ಪ್ರೌಡಶಾಲೆಯ ದೈಹಿಕ ಶಿಕ್ಷಕ ಮಹಾಬಲೇಶ್ವರ ನಾಯ್ಕ ಹಾಗೂ ವಿಮಲಾ ನಾಯ್ಕ ಇವರ ಸುಪುತ್ರನಾಗಿದ್ದು ಮೂಲತಃ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದ ಕಾನಳ್ಳಿಯವರಾಗಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version