Important
Trending

ಎರಡು ಕಾರುಗಳ ನಡುವೆ ಭೀಕರ ಅಪಘಾತ: ಮೂವರ ಸಾವು: ಹಲವರಿಗೆ ಗಂಭೀರ ಗಾಯ

ಕಾರವಾರ: ಎರಡು ಕಾರ್‌ಗಳ ನಡುವೆ ನಡೆದ ಭೀಕರ ಅಪಘಾತವೊಂದರಲ್ಲಿ ಮೂವರು ವ್ಯಕ್ತಿಗಳು ಮೃತಪಟ್ಟು, ಹಲವರು ತೀವ್ರವಾಗಿ ಗಾಯಗೊಂಡ ಘಟನೆ ನಗರ ಹಾಗೂ ಗೋವಾದ ಕಾಣಕೋಣದ ನಡುವಿನ ಮನೋಹರ್ ಪರಿಕರ್ ಬೈಪಾಸ್ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹೊನ್ನಾವರದಲ್ಲಿ 60 ಜನರಿದ್ದ ಬಸ್ ಪಲ್ಟಿ: 18 ಮಂದಿಗೆ ಗಾಯ

ಕಾಣಕೋಣದಿoದ ಕಾರವಾರದ ಕಡೆಗೆ ಬರುತ್ತಿದ್ದ ಕ್ವಿಡ್ ಕಾರು ಹಾಗೂ ಕಾರವಾರದಿಂದ ಮಡಗಾಂವ ಕಡೆಗೆ ತೆರಳುತ್ತಿದ್ದ ಐ-20 ಕಾರಿನ ನಡುವೆ ಡಿಕ್ಕಿ ನಡೆದಿದೆ. ಈ ಅಪಘಾತದಲ್ಲಿ ಕಾರವಾರದ ಮೂವರು ಸಾವನ್ನಪ್ಪಿದ್ದು, ಮೃತ ದುರ್ದೆÊವಿಗಳನ್ನು ಮಾಜಾಳಿ ಮೂಲದ ಹರೀಶ ಉಲ್ಲಾಸ್ ನಾಗೇಕರ್ (35), ವೀಣಾ ಉಲ್ಲಾಸ್ ನಾಗೆಕರ್ (60) ಹಾಗೂ ಉಲ್ಲಾಸ ರಾಮ ನಾಗೇಕರ ಎಂದು ಗುರುತಿಸಲಾಗಿದೆ.

ಡಿವೈಡರ್‌ಗೆ ಡಿಕ್ಕಿಹೊಡೆದು ಮತ್ತೊಂದು ಕಡೆ ಬರುತ್ತಿದ್ದ ಕಾರಿಗೆ ಡಿಕ್ಕಿ

ಕಾರವಾರದ ಕಡೆಗೆ ಬರುತ್ತಿದ್ದ ಕಾರು ಚಾಲಕ ಅತಿವೇಗವಾಗಿ ಚಲಿಸಿದ್ದು ನಿಯಂತ್ರಣ ತಪ್ಪಿ ಮನೋಹರ್ ಪರಿಕರ್ ಬ್ರಿಜ್‌ನ ಚತುಷ್ಪಥ ರಸ್ತೆಯ ಡಿವೈಡರ್‌ಗೆ ಕಾರ್ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ಪರಿಣಾಮ ಕಾರು ಡಿವೈಡರ್ ದಾಟಿ ಎದುರುಗಡೆಯಿಂದ ಇನ್ನೊಂದು ಲೇನ್‌ನಲ್ಲಿ ಬರುತ್ತಿದ್ದ ಕಾರಿನ ಮೇಲೆ ಹೋಗಿ ಬಿದ್ದಿದೆ. ಈ ವೇಳೆ ಅಲ್ಲಿಯೇ ತೆರಳುತ್ತಿದ್ದ ಡಿಯೋ ದ್ವೀಚಕ್ರ ವಾಹನದ ಚಾಲಕನ ಮೇಲೆ ಈ ಎರಡು ಕಾರುಗಳು ಬಿದ್ದಿವೆ. ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ವ್ಯಕ್ತಿ ಕೂಡಾ ತೀವ್ರವಾಗಿ ಗಾಯಗೊಂಡಿದ್ದಾನೆ.

ವಿಸ್ಮಯ ನ್ಯೂಸ್, ಕಾರವಾರ

land for sale

Back to top button