ಸ್ನೇಹಿತನೊಂದಿಗೆ ಕಲ್ಲುಕ್ವಾರಿಯಲ್ಲಿ  ಈಜಲು ತೆರಳಿದ ವೇಳೆ ನೀರಿನಲ್ಲಿ‌ ಮುಳುಗಿ ಯುವಕ ಸಾವು

ಭಟ್ಕಳ: ಹಲವಾರು ವರ್ಷಗಳಿಂದ ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ  ಈಜಲು ತೆರಳಿದ ವೇಳೆ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿರಾಲಿ ನಿಲಕಂಠದ ಹುಲ್ಲುಕ್ಕಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂದಕ: ಬಾಯ್ತೆರೆದು ಅಪಾಯಕ್ಕೆ ಕಾದಿರುವ ರಸ್ತೆ: ವಾಹನ ಸವಾರರಿಗೆ ಎಚ್ಚರಿಕೆ

ಮೃತ ಯುವಕನನ್ನು ಜುಬೇರ್ ಇರ್ಶಾದ್ ಅಲಿಅಕ್ಬರ್ ಕಾರಗದ್ದೆ ನಿವಾಸಿ ಎಂದು ತಿಳಿದು ಬಂದಿದೆ. ಈತ ತನ್ನ ಸ್ನೇಹಿತರೊಂದಿಗೆ ಪಾಳು ಬಿದ್ದ ಶಿಲೆ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿದ ವೇಳೆ ಈ ದುರ್ಘಟನೆ ನಡೆದಿದೆ . ಅನೇಕ ವರ್ಷದಿಂದ ಶಿಲೆ ಕಲ್ಲು ಕ್ವಾರಿ ನಡೆಸಿ ಸದ್ಯ ಖಾಲಿ ಇರುವ ಈ ಸ್ಥಳದಲ್ಲಿ ಮಳೆ ನೀರು ತುಂಬಿ ಹೊಳೆಯಂತಾಗಿದೆ.

ಶುಕ್ರವಾರದ ರಜೆಯ ದಿನವನ್ನು ಕಳೆಯಲು ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ ವೇಳೆ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಯುವಕ ನೀರಿನಲ್ಲಿ ಮುಳುಗಿರುವ ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳಕ್ಕೆ ಬಂದು ಮೃತ ದೇಹ ಪತ್ತೆ ಹಚ್ಚಲು ಸಹಕರಿಸಿದರು.

ಅಂತಿಮವಾಗಿ ಮುಳುಗಿ ಸಾವನ್ನಪ್ಪಿದ ಯುವಕರ ಮೃತ ದೇಹ ಪತ್ತೆ ಹಚ್ಚುವಲ್ಲಿ ಅಲ್ಲಿನ ಸ್ಥಳೀಯ ಯುವಕರು ಯಶಸ್ವಿಯಾದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಸುಮಂತ.ಬಿ, ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಭರತ್ ನಾಯಕ, ಭಟ್ಕಳ ಅಗ್ನಿಶಾಮಕ ದಳ ,ಎಸ್.ಡಿ.ಆರ್.ಆಫ್ ತಂಡ ಹಾಗೂ ಮಾವಳ್ಳಿ ಕಂದಾಯ ನಿರೀಕ್ಷಕರಾದ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕ ಹೇಮಾ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

land for sale
Exit mobile version