
ಭಟ್ಕಳ: ತಾಲ್ಲೂಕಿನಲ್ಲಿ ಕರೋನಾ ಕಾಟ ಮುಂದುವರಿದಿದ್ದು ಮತ್ತೆ 5 ಜನರಲ್ಲಿ ಕರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ.ಮಹಾರಾಷ್ಟ್ರ ದಿಂದ ಬಂದ ಒಂದೇ ಕುಟುಂಬದ ನಾಲ್ವರು ಉತ್ತರ ಪ್ರದೇಶದಿಂದ ಬಂದ ಓರ್ವ ವ್ಯಕ್ತಿ ಸೇರಿ ಐವರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ.
ಜೂನ್.17 ರಂದು ಒಂದೇ ಕುಟುಂಬದ 4 ಜನ ಮಹಾರಾಷ್ಟ್ರದಿಂದ ರೈಲಿನ ಮೂಲಕ ಭಟ್ಕಳಕ್ಕೆ ಬಂದಿದ್ದು. ಇವರನ್ನೆಲ್ಲ ಸೋನಾರಾಕೇರಿ ಕಿತ್ತೂರು ರಾಣಿ ಚನ್ನಮ ವಸತಿ ಗ್ರಹದಲ್ಲಿ ಸರ್ಕಾರಿ ಕ್ವಾರಂಟೈನಗೆ ಒಳಪಡಿಸಿದ್ದರು. ಜೂನ್.18 ರಂದು ನಾಲ್ಕು ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇಂದು ಕೋರೊನಾ ಸೋಂಕು ಇರುವುದು ಪತ್ತೆಯಾಗಿದೆ. ಇವರು ತಾಲೂಕಿನ ಬಂದರ ರೋಡ ನಿವಾಸಿಯಾಗಿದ್ದು (45 ) ವರ್ಷದ ಪುರುಷ (42) ವರ್ಷದ ಮಹಿಳೆ (19 ) ಯುವತಿ 14 ವರ್ಷದ ಯುವಕ ಇವರೆಲ್ಲ ಒಂದೇ ಕುಟುಂಬದವರಾಗಿದ್ದಾರೆ .ಇನ್ನೋರ್ವ ತಾಲೂಕಿನ ಮುಗಳಿಹೋಂಡಾ ನಿವಾಸಿ (30) ವರ್ಷದವನಾಗಿದ್ದು ಈತ ಉತ್ತರ ಪ್ರದೇಶದಿಂದ ಬಂದವನಾಗಿದ್ದು .ಈತನಿಗೆ ಸರ್ಕಾರಿ ಕ್ವಾರಂಟೈನ ಎಲ್ಲದೆ ಇರುವ ಕಾರಣ ಮನೆಯಲ್ಲಿ ಹೋಮ್ ಕ್ವಾರಂಟೈನಲ್ಲಿ ಇದ್ದ ಎನ್ನಲಾಗಿದ್ದು .ಇತನಲ್ಲೂ ಸೋಂಕು ಇರುವುದು ಎಂದು ಪತ್ತೆಯಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ