Uttara Kannada
Trending

ಅಮವಾಸೆ ಸೂರ್ಯಗ್ರಹಣದ ಬಳಿಕ ಸಮುದ್ರ ಸ್ನಾನ ಮಾಡಿದ ಶಾಸಕ ಸುನೀಲ ನಾಯ್ಕ

ಭಟ್ಕಳ: ಅಪರೂಪದ ಭಾಗಶಃ ಕಂಕಣ ಸೂರ್ಯಗ್ರಹಣದ ಬಳಿಕ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಪವಿತ್ರ ಸಮುದ್ರ ಸ್ನಾನಗೈದರು. ಇಲ್ಲಿನ ಜಾಲಿ ಬೀಚ್ ಸಮುದ್ರ ತೀರದಲ್ಲಿ ಗ್ರಹಣದ ಬಳಿಕೆ ಕಾರ್ಯಕರ್ತರು ಹಾಗೂ ಸ್ನೇಹಿತರೊಡನೆ ಬಂದು ಸಮುದ್ರ ಸ್ನಾನ ಮಾಡಿದ್ದಾರೆ. ಸಮುದ್ರ ಸ್ನಾನ ಬಳಿಕ ಮಾತನಾಡಿದ ಶಾಸಕ ಸುನೀಲ ನಾಯ್ಕ ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಬೇಕು. ಗ್ರಹಣ ಹಿಡಿದಾಗ ಮಾಡುವ ಸ್ನಾನವನ್ನು ಸ್ಪರ್ಶಸ್ನಾನ ಎನ್ನುತ್ತಾರೆ. ಗ್ರಹಣ ಬಿಟ್ಟಾಗ ಮಾಡುವ ಸ್ನಾನವನ್ನು ಮೋಕ್ಷಸ್ನಾನ ಎನ್ನುತ್ತಾರೆ ಎಂದರು.

ಇಂತಹ ಗ್ರಹಣದ ಸಂದರ್ಭದಲ್ಲಿ ಸ್ಪರ್ಶಸ್ನಾನ ಮೋಕ್ಷಸ್ನಾನ ಮಾಡುವುದು ಸಹ ಅತ್ಯವಶ್ಯವಾಗಿದೆ . -ಸುನೀಲ್ ನಾಯ್ಕ, ಶಾಸಕರು, ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ

ಉದಯ್ ಎಸ್ ನಾಯ್ಕ, ವಿಸ್ಮಯ ನ್ಯೂಸ್, ಭಟ್ಕಳ

[sliders_pack id=”1487″]

Back to top button