ಜಾಗಗಳ ನಡುವೆ ಇರುವ ಬೇಲಿಯ ವಿಷಯದ ಕುರಿತ ತಕರಾರನ್ನೇ ಮನಸ್ಸಿಗೆ ಹಚ್ಚಿಕೊಂಡು ಸಾವಿಗೆ ಶರಣಾದ ವ್ಯಕ್ತಿ

ಸಿದ್ದಾಪುರ: ಜಾಗಗಳ ನಡುವೆ ಇರುವ ಬೇಲಿಯ ವಿಷಯವಾಗಿ ತಕರಾರನ್ನೇ ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡ ಘಟನೆ ತಾಲೂಕಿನ ದೊಡ್ಮನೆ ಸಮೀಪದ ಬಳೂರ್ ನಲ್ಲಿ ನಡೆದಿದೆ. ಗಣಪತಿ ಗೌಡ (56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂoದು ತಿಳಿದುಬಂದಿದೆ. ಈತ ಕೃಷಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ, ತಮ್ಮ ಮನೆ ಇರುವ ಜಾಗಾಕ್ಕೆ ತಾಗಿ ಅಣ್ಣ ಜಾಗಯಿದ್ದು , ಊರಿನಲ್ಲಿ ಸಂಬoಧಿಕರು ಹಾಗೂ ಹಿರಿಯರು ಸೇರಿ ಬಗೆಹರಿಸಿಕೊಳ್ಳಲು ರಾಜಿ ಪಂಚಾಯಿತಿ ಮಾಡಿದ್ದರು.

ಜೂನಿಯರ್ ನರೇಂದ್ರ ಮೋದಿ: ನೋಡೋಕೆ ಸೇಮ್ ಮೋದಿಯಂತೆ ಕಾಣ್ತಾರೆ ಇವರು!

ಅಲ್ಲದೇ ತಕರಾರು ಇದ್ದ ಬಗ್ಗೆ ಮೃತನ ಅಣ್ಣನು ಠಾಣೆಯಲ್ಲಿ ದೂರು ನೀಡಿದ್ದನು. ಹೀಗಿರುವಲ್ಲಿ ರವಿವಾರ ಮನೆಯಿಂದ ಸೊಪ್ಪು ತರಲೆಂದು ಬೆಟ್ಟಕ್ಕ ಹೋಗುವುದಾಗಿ ಹೇಳಿ ಹೋದವನು ಮನೆಯಿಂದ ಸ್ವಲ್ಪ ದೂರದಲ್ಲಿನ ಅರಣ್ಯಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

land for sale
Exit mobile version