ಕುಮಟಾ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಪಂಚಾಯತ ಉತ್ತರಕನ್ನಡ ಡಿ.ಎಸ್.ಇ.ಆರ್.ಟಿ ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಟಿ ಜನತಾ ವಿದ್ಯಾಲಯ ಮಿರ್ಜಾನನಲ್ಲಿ ನಡೆಯಿತು. ವಿಜ್ಞಾನ ವಿಚಾರಗೋಷ್ಟಿಯ ವಿಷಯ ಸುಸ್ಥಿರ ಅಭಿವೃದ್ಧಿಯ ಸವಾಲುಗಳು ಮತ್ತು ಭವಿಷ್ಯತ್ತಿನ ಮೂಲವಿಜ್ಞಾನ. ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯ ವಿದ್ಯಾರ್ಥಿನಿ ಸುವರ್ಣ ಮಂಜುನಾಥ ಭಂಡಾರಕರ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಕ್ಕಳ ಕಳ್ಳರು ಬಂದಿರುವುದು ನಿಜನಾ? ಅಸಲಿ ಸುದ್ದಿ ಏನು? ತುರ್ತು ಸಂದರ್ಭಗಳಲ್ಲಿ 112 ಕ್ಕೆ ಕರೆ ಮಾಡಿ
ಪ್ರಶಸ್ತಿ ವಿಜೇತ ವಿದ್ಯಾರ್ಥಿನಿ ಹಾಗೂ ಮಾರ್ಗದರ್ಶಕ ಶಿಕ್ಷಕ ಶ್ರೀ ಮಹಾದೇವ ಬೊಮ್ಮು ಗೌಡ ಇವರನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ಮತ್ತು ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕರಾದ ಶ್ರೀ ರೋಹಿದಾಸ ಎಸ್ ಗಾಂವಕರ, ಶಿಕ್ಷಕ ವೃಂದದವರು, ಶ್ರೀ ಈಶ್ವರ ನಾಯ್ಕ ಡಿ.ಡಿ.ಪಿ.ಐ ಉತ್ತರಕನ್ನಡ, ಶ್ರೀ ಎನ್ ಜಿ ನಾಯಕ ಡಯಟ್ ಪ್ರಾಂಶುಪಾಲರು, ಶ್ರೀ ಆರ್.ಎಲ್.ಭಟ್ಟ್ ಕ್ಷೇತ್ರ ಶಿಕ್ಷಣಾಧಿಕಾರಿ ಕುಮಟಾ, ಶ್ರೀ ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಹಿರೇಗುತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗರತ್ನ ಗಾಂವಕರ ಹಾಗೂ ಸದಸ್ಯರು, ಊರಿನ ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ