ಕುಮಟಾ: 17
ಅಂಕೋಲಾ: 10
ಹೊನ್ನಾವರ: 4
ಭಟ್ಕಳ: 6
ಶಿರಸಿ: 2
ಹಳಿಯಾಳ: 1
ಜೊಯಿಡಾ: 2
ಕಾರವಾರ: 6
ಸಿದ್ದಾಪುರ: 3
ಜಿಲ್ಲೆಯಲ್ಲಿಂದು 69 ಕರೊನಾ ಕೇಸ್
ಭಟ್ಕಳದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯೆಗೂ ಸೋಂಕು
ಕುಮಟಾದಲ್ಲಿ 17 ಪ್ರಕರಣ ದಾಖಲು
ಹೊನ್ನಾವರಲ್ಲಿ ನಾಲ್ವರಿಗೆ ಕರೊನಾ ಪಾಸಿಟಿವ್
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 69 ಕರೊನಾ ಪ್ರಕರಣ ದೃಢಪಟ್ಟಿದೆ. ಕುಮಟಾದಲ್ಲಿ 17, ಅಂಕೋಲಾದಲ್ಲಿ 10, ಹೊನ್ನಾವರದಲ್ಲಿ 4, ಭಟ್ಕಳದಲ್ಲಿ 6, ಶಿರಸಿಯಲ್ಲಿ 2, ಹಳಿಯಾಳದಲ್ಲಿ 1, ಜೊಯಿಡಾ 2, ಕಾರವಾರದಲ್ಲಿ 6, ಯಲ್ಲಾಪುರದಲ್ಲಿ 12, ಮುಂಡಗೋಡದಲ್ಲಿ 6, ಸಿದ್ದಾಪುರದಲ್ಲಿ 3 ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1,085 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 445 ಮಂದಿ ಗುಣಮುಖರಾಗಿದ್ದಾರೆ.
ಭಟ್ಕಳದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯೆಗೂ ಸೋಂಕು:
ಭಟ್ಕಳ: ತಾಲೂಕಿನಲ್ಲಿ ಭಾನವಾರದಂದು ಐವರಲ್ಲಿ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಜೊತೆಗೆ ತಾಲೂಕಿನ ಖಾಸಗಿ ಆಸ್ಪತ್ರೆಯ ವೈದ್ಯೆಗೆ ಸೋಂಕು ಇರುವುದು ದೃಢಪಟ್ಟಿದೆ. ಬೆಲ್ನಿ ನಿವಾಸಿ 24 ವರ್ಷದ ಯುವತಿ, ಅರ್ಬನ್ ಬ್ಯಾಂಕ್ ಎದುರಿನ 25 ವರ್ಷದ ಯುವಕ, ಮುರುಡೇಶ್ವರದ 49 ವರ್ಷದ ಪುರುಷ ಹಾಗೂ 29 ವರ್ಷದ ಕರಾವಳಿ ಕಾವಲು ಪಡೆಯ ಮತ್ತು ತಾಲೂಕಿನ ಖಾಸಗಿ ಆಸ್ಪತ್ರೆಯ 30 ವರ್ಷದ ವೈದ್ಯೆಗೆ ಸೋಂಕು ಇರುವುದು ಪತ್ತೆಯಾಗಿದೆ.
ಕುಮಟಾದಲ್ಲಿ 17 ಪ್ರಕರಣ ದಾಖಲು:
ಕುಮಟಾ: ಕುಮಟಾದಲ್ಲಿ ಕರೊನಾ ಕೇಸ್ ದಿನೇ ದಿನೇ ಹೆಚ್ಚುತ್ತಿದೆ. ಇಂದು ಒಟ್ಟು 17 ಪ್ರಕರಣ ದಾಖಲಾಗಿದೆ. ತಾಲೂಕಿನ ಅಂತ್ರವಳ್ಳಿ, ಕತಗಾಲಿನ ಮಾವಳ್ಳಿ, ಮಾಸ್ತಿಹಳ್ಳ, ಗುಡೇಅಂಗಡಿ, ಮಾಸೂರು, ಹಳ್ಕಾರ್ ಗೂ ಸೋಂಕು ವ್ಯಾಪಿಸಿದೆ.
ಹೊನ್ನಾವರಲ್ಲಿ ನಾಲ್ವರಿಗೆ ಕರೊನಾ ಪಾಸಿಟಿವ್:
ಹೊನ್ನಾವರ: ತಾಲೂಕಿನಲ್ಲಿ ಇಂದು ನಾಲ್ಕು ಕರೊನಾ ಪಾಸಿಟಿವ್ ಬಂದಿದೆ. ಹುಬ್ಬಳ್ಳಿಯಿಂದ ಆಗಮಿಸಿದ ಬಳ್ಕೂರಿನ ಒಂದೆ ಕುಟುಂಬದ 30 ಮತ್ತು 31 ವರ್ಷದ ಸಹೋದರರಲ್ಲಿ ಕರೊನಾ ದೃಢಪಟ್ಟಿದೆ. ಅಲ್ಲದೆ, ಕೆಲವು ದಿನಗಳ ಹಿಂದೆ ವರದಿಯಾದ ಸೋಂಕಿತನ ಸಂಪರ್ಕಕ್ಕೆ ಬಂದ ಕಾಸರಕೋಡಿನ 45 ವರ್ಷದ ಪುರುಷನಲ್ಲಿ, ಗೇರುಸೋಪ್ಪಾ ಮಹಿಮೆಯ 32 ವರ್ಷದ ಯುವಕನಿಗೂ ಸೋಂಕು ತಗುಲಿದೆ. ಈ ಯುವಕನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೆ ಇರುವುದರಿಂದ ಐಎಲ್‌ಐ ಪ್ರಕರಣ ಎಂದು ತೀರ್ಮಾನಿಸಲಾಗಿದೆ.
ಅಂಕೋಲಾ: ತಾಲೂಕಿನಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ರವಿವಾರ ಮತ್ತೆ 10 ಹೊಸ ಸೋಂಕಿನ ಪ್ರಕರಣಗಳು ಧೃಡಪಟ್ಟಿವೆ. ಇವರೆಲ್ಲರೂ ಈ ಹಿಂದಿನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರಿರಬಹುದೆAದು ಅಂದಾಜಿಸಲಾಗಿದೆ.
ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)