ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಅಸೋಸಿಯೇಷನ್ ಆಪ್ ಇಂಜಿನಿಯರ್ಸ್ ಅಂಕೋಲಾ ಮತ್ತು ನಾಗರಿಕ ವೇದಿಕೆ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಇಂಜಿನಿಯರ್ಸ್ ಡೇ ಆಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ತಾಲೂಕಿನ ಪಿ.ಎಂ ಹೈಸ್ಕೂಲ್ ನ ರೈತ ಭವನದಲ್ಲಿ ನಡೆಯಿತು.
100 ಅಡಿಗಿಂತ ಹೆಚ್ಚು ಆಳದ ಪ್ರಪಾತಕ್ಕೆ ಉರುಳಿದ ಲಾರಿ: ಚಾಲಕ ಹಾಗೂ ನಿರ್ವಾಹಕ ಸ್ಥಳದಲ್ಲೇ ಸಾವು
ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್ ಅವರು ಭಾರತರತ್ನ ಸರ್. ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಇಂಜಿನಿಯರ್ ಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು ಪ್ರತಿಯೊಂದು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇಂಜಿನಿಯರ್ ಗಳ ಕೌಶಲ್ಯವನ್ನು ಆಧರಿಸಿರುತ್ತದೆ ಎಂದರು.
ವಿಜ್ಞಾನಿಗಳ ಕನಸಿನ ಯೋಜನೆಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರಬೇಕಾದರೆ ಅದರ ಹಿಂದೆ ಇಂಜಿನಿಯರ್ ಗಳ ಕಠಿಣ ಪರಿಶ್ರಮ ಇರುತ್ತದೆ ಎಂದ ಅವರು ಭಾರತರತ್ನ ಸರ್. ವಿಶ್ವೇಶ್ವರಯ್ಯರವರಂಥ ಮಹಾನ್ ಇಂಜಿನಿಯರ್ ನಮ್ಮ ನಾಡಿನವರಾಗಿದ್ಧು ಎಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದರಲ್ಲದೇ , ಸರ್ ಎಂ ವಿಶ್ವೇಶ್ವರಯ್ಯನವರ ವಂಶಸ್ಥರು ನನ್ನ ಪರಿಚಿತರಿದ್ದು,ಪೊಲೀಸ್ ಅಧಿಕಾರಿಯಾದ ನನ್ನನ್ನು ಇಂಜಿನಿಯರ್ಸ್ ಡೇ ಜೊತೆ ಬೆಸೆಯಲು ಅದು ಒಂದು ಸೌಭಾಗ್ಯ ಎಂದು ತಿಳಿದುಕೊಂಡಿದ್ದೇನೆ. ರಾಯಚೂರು ಮಾನ್ವಿ ತಾಲೂಕಿನ ಹೆಣ್ಣು ಮಗಳೊಬ್ಬಳು ಇಂಜಿನಿಯರ್ ಕಲಿತು ತನ್ನ ಜ್ಞಾನವನ್ನು ಕೃಷಿಗೆ ಬಳಸಿಕೊಂಡು ಸಾಧಕ ರೈತಳಾದ ಯಶೋಗಾಥೆಯನ್ನು ಮನಮುಟ್ಟುವಂತೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಹರಿಹರ ಹರಿಕಂತ್ರ ಮಾತನಾಡಿ ಇಂಜಿನಿಯರ್ ಗಳು ದಕ್ಷತೆ ಮತ್ತು ನಿಸ್ವಾರ್ಥ ಕೆಲಸದ ಮೂಲಕ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸರ್ ಎಂ.ವಿಶ್ವೇಶ್ವರಯ್ಯನವರು ನಾಡಿನ ಜನತೆಗಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆ ಅವರನ್ನು ಜಗತ್ತಿನ ಮಾದರಿ ಇಂಜಿನಿಯರ್ ಎಂದು ಗುರುತಿಸುವಂತಾಗಿದೆ ಎಂದರು.ಮುಖ್ಯ ಅತಿಥಿ ಪಿ.ಎಂ.ಹೈಸ್ಕೂಲ್ ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪೆನ್ ವಿತರಣೆ
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಸಂಜೀವ ನಾಯಕ ಮತ್ತು ಎಡಿಶನಲ್ ಎಸ್ಪಿ ಬದ್ರೀನಾಥ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಗಳಿಸಿದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಮತ್ತು ಪಿ.ಎಂ ಹೈಸ್ಕೂಲಿನ ಹಲವು ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪೆನ್ ವಿತರಿಸಲಾಯಿತು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸಂತೋಷ ನಾಯ್ಕ ಕೇಣಿ ಸ್ವಾಗತಿಸಿದರು, ಗೌರವಾಧ್ಯಕ್ಷ ಪ್ರದೀಪ ನಾಯ್ಕ ತೆಂಕಣಕೇರಿ ಪದಾಧಿಕಾರಿಗಳಾದ, ಪ್ರಕಾಶ ನಾಯ್ಕ, ಪ್ರಭಾಕರ ಇಂಜಿನಿಯರ್, ತುಕಾರಾಮ ಖಾರ್ವಿ, ರಾಜು ತಾಂಡೇಲ್, ಕೆಇಬಿ ಲಕ್ಷ್ಮಣ ನಾಯ್ಕ, ಜಾದವ ನಾಯ್ಕ ಮೊದಲಾದವರು ಸಂಘಟನೆಯಲ್ಲಿ ಸಹಕರಿಸಿದರು.
ಶಿಕ್ಷಕ ಜಿ.ಆರ್. ತಾಂಡೇಲ್ ಕಾರ್ಯಕ್ರಮ ನಿರ್ವಹಿಸಿದರು.ತಾಲೂಕು ಅಧ್ಯಕ್ಷ ಸಂತೋಷ ನಾಯ್ಕ ವಂದಿಸಿದರು.ಪ್ರಮುಖರಾದ ಗಜಾನನ ಆರ್ ನಾಯಕ, ಭಾಸ್ಕರ ಇಂಜಿನಿಯರ್, ರಾಜು ಅಲಗೇರಿ, ರಾಜು ಹರಿಕಂತ್ರ , ತಾರಾ ಗಾಂವಕರ, ರಾಜೇಶ್ವರಿ ಕೇಣಿಕರ, ನಿಲೇಶ ದುರ್ಗೇಕರ ಮತ್ತಿತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು,ವಿದ್ಯಾರ್ಥಿ ಪಾಲಕರು,ಸಂಘಟನೆಯ ಪದಾಧಿಕಾರಿಗಳು ಹಾಗೂ ಕುಟುಂಬ ಸದಸ್ಯರು, ಇತರೆ ಸಾರ್ವಜನಿಕರು ಉಪಸ್ಥಿತರಿದ್ದರು.ಸಿಪಿಐ ಸಂತೋಷ ಶೆಟ್ಟಿ,ಪಿಎಸ್ಐ ಪ್ರವೀಣ್ ಕುಮಾರ್ ಹಾಜರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ