Big NewsImportant
Trending

ರಾಜ್ಯ ಹೆದ್ದಾರಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷ: ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಆತಂಕ

ಹೆಚ್ಚುತ್ತಲೇ ಇದೆ ಮೊಸಳೆಗಳ ಸಂಖ್ಯೆ

ದಾoಡೇಲಿ: ನಗರ ಮತ್ತು ಜನವಸತಿ ಪ್ರದೇಶದಲ್ಲೂ ಮೊಸಳೆ ಕಾಟ ಹೆಚ್ಚಿದ್ದು, ಜನರು ಆತಂಕ ಪಡುವಂತೆ ಮಾಡಿದೆ. ಕಳೆದ ಒಂದು ವರ್ಷದಿಂದ ನಗರ ಹಾಗೂ ನಗರದ ಸುತ್ತಮುತ್ತಲು ಮೊಸಳೆಗಳ ಹಾವಳಿ ವ್ಯಾಪಕವಾಗಿರುವುದರ ಜೊತೆ ನಾಲ್ಕೈದು ಜನರನ್ನು ಮೊಸಳೆ ಎಳೆದೊಯ್ದಿದೆ. ಅಲ್ಲದೆ, ಜನವಸತಿ ಪ್ರದೇಶದಲ್ಲಿ ಮೊಸಳೆ ಓಡಾಡುತ್ತಿರುವುದು ಆತಂಕ ಮೂಡಿಸಿದೆ.

ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು

ಮೊಸಳೆಗಳ ಸಂಖ್ಯೆಯ ಏರುತ್ತಿರುವುದರಿಂದ ಹಲವು ಪ್ರದೇಶಗಳಲ್ಲಿ ಮೊಸಳೆಗಳು ಪ್ರತ್ಯಕ್ಷವಾಗುತ್ತಿರುವುದು ಸಾಮಾನ್ಯ ಎಂಬoತಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ನಗರದ ಸಮೀಪ ವಿರುವ ಕೇರವಾಡದ ಶ್ರೇಯಸ್-ಶ್ರೀನಿಧಿ ಕಾರ್ಖಾನೆಯ ಹತ್ತಿರದಲ್ಲಿ ಹಾದು ಹೋಗುವ ದಾಂಡೇಲಿ-ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಮೊಸಳೆಯೊಂದು ಪ್ರತ್ಯಕ್ಷಗೊಂಡ ಆತಂಕ ಸೃಷ್ಟಿಸಿದೆ. ಈಗಾಗಲೇ ಮೊಸಳೆಗಳ ದಾಳಿಯಿಂದ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಈಗಾಗಲೆ ಅರಣ್ಯ ಇಲಾಖೆ, ಮತ್ತು ಸಂಬoಧಿಸಿದ ಇಲಾಖೆಗಳು ಹಲವು ಕ್ರಮಕೈಗೊಂಡಿದೆ. ಏನೇ ಮಾಡದಿದ್ದರೂ, ಈ ರೀತಿ ರಸ್ತೆ ಮೇಲೆ ಮೊಸಳೆಗಳು ಓಡಾಡಿದರೆ ಏನು ಮಾಡಬೇಕು ಎಂಬ ಚಿಂತೆ ಸಾರ್ವಜನಿಕರನ್ನು ಕಾಡತೊಡಗಿದೆ.

ಮೀನು ಹಿಡಿಯುತ್ತಿರುವಾಗ ಮೊಸಳೆ ಎಳೆದೊಯ್ದು ವ್ಯಕ್ತಿ ನಾಪತ್ತೆಯಾಗಿದ್ದ

ಕೆಲದಿನಗಳ ಹಿಂದೆ ನದಿ ಪಕ್ಕದಲ್ಲಿ ಮೀನು ಹಿಡಿಯುತ್ತಿರುವಾಗ ಮೊಸಳೆ ಎಳೆದೊಯ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸತತ ಹುಡುಕಾಟದ ಬಳಿಕ ದಾಂಡೇಲಿ ಬಳಿ ಕಾಳಿ ನದಿಯಲ್ಲಿ ಪತ್ತೆಯಾಗಿತ್ತು. ದಾಂಡೇಲಿಯ ವಿನಾಯಕ ನಗರದ ಅಲೈಡ್ ಬಳಿ ಮೀನು ಹಿಡಿಯುತ್ತಿದ್ದ ಸುರೇಶ್ ವಸಂತ್ ತೇಲಿ(44) ಎನ್ನುವ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿತ್ತು. ರೆಸ್ಕ್ಯೂ ತಂಡ ಮತ್ತು ಪೊಲೀಸರು ಸತತ ಶೋಧ ಕಾರ್ಯ ನಡೆಸಿ, ಶವವನ್ನು ಪತ್ತೆ ಹೆಚ್ಚಿದ್ದರು.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button