Important
Trending

ಕಳೆದ 11 ವರ್ಷಗಳಿಂದ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ  ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಅಂಕೋಲಾ: ಅಬಕಾರಿ ಕಾಯ್ದೆಯಡಿ ಬಂಧಿತರಾಗಿ ಕಳೆದ 11 ವರ್ಷಗಳಿಂದ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ  ತಲೆಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿಗಳನ್ನು  ಅಂಕೋಲಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೇರಳ ಕಾಸರಗೋಡು ಚೆನ್ನಗಿರಿ ನಿವಾಸಿ ವಿನೋದಕುಮಾರ  ಭಾಸ್ಕರನ್ ಮತ್ತು ಚೆಮನಾಡ ನಿವಾಸಿ ಅಬ್ದುಲ್ ಮಹಮ್ಮದ್ ಕುಂಞ ಬಂದಿತ ಆರೋಪಿಗಳಾಗಿದ್ದು ಇವರು ಕಳೆದ 11 ವರ್ಷಗಳಿಂದ ಅಂಕೋಲಾ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು.

ತಡರಾತ್ರಿ ಎಟಿಎಂ ಒಡೆದು ಹಣದೋಚುವ ಪ್ರಯತ್ನ: ಸದ್ದು ಕೇಳಿ ಸುತ್ತಮುತ್ತಲ ಜನರು ಸ್ಥಳಕ್ಕೆ ಬಂದಾಗ ಕಳ್ಳರು ಪರಾರಿ

ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿ.ಎಸ್. ಐ ಪ್ರವಿಣಕುಮಾರ್, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕಟಬರ ಅವರನ್ನೊಳ ಗೊಂಡ ತಂಡ ದೂರದ  ಕೇರಳಕ್ಕೆ ತೆರಳಿ ಅತೀ ಕಡಿಮೆ ಅವಧಿಯಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿ,   ಆರೋಪಿಗಳನ್ನು ಬಂಧಿಸಿ ಕರ್ನಾಟಕಕ್ಕೆ ಕರೆತಂದಿದ್ದಾರೆ.

ಅಂಕೋಲಾ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರ ವಿಶೇಷ ಸೂಚನೆ ಮೇರೆಗೆ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು ಬಹು ವರ್ಷಗಳಿಂದ ತಮ್ಮ ಠಾಣಾ  ವ್ಯಾಪ್ತಿಯಲ್ಲಿ ಬಾಕಿ ಇರುವ ಇಂತಹ ಪ್ರಕರಣಗಳನ್ನು ಕೈಗೆತ್ತಿಕೊಂಡು ಬೇರೆ ಬೇರೆ ಪ್ರದೇಶ ಹಾಗೂ ರಾಜ್ಯಗಳಲ್ಲಿ ತಲೆಮರಿಸಿಕೊಂಡಿರುವ ಆರೋಪಿಗಳ ಪತ್ತೆಗೆ ಮುಂದಾಗುತ್ತಿದ್ದಾರೆ.

ಇತ್ತೀಚಿಗಷ್ಟೇ ಇದೇ ರೀತಿ ಬೇರೊಂದು ಪ್ರಕರಣದಲ್ಲಿ ಗೋವಾದಲ್ಲಿ ತಲೆಮೆರೆಸಿಕೊಂಡಿದ್ದ ಆರೋಪಿಯನ್ನು ಹಿಡಿದು ತಂದಿದ್ದ ಅಂಕೋಲಾ ಪೊಲೀಸರು,ಈ ಬಾರಿ ಕೇರಳದಿಂದ ಇರುವರು ಆರೋಪಿತರನ್ನು  ಪತ್ತೆ ಹಚ್ಚಿ ಕರೆತಂದು ಕಾನೂನು ಕ್ರಮ ಕೈಗೊಂಡಿರುವುದಕ್ಕೆ ಎಸ್ ಪಿ ಡಾ. ಸುಮನ್ ಪನ್ನೇ ಕರ್, ಎಡಿಷನಲ್ ಎಸ್ಪಿ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button