ಅನುಮತಿಯಿಲ್ಲದೆ ಮನೆಯಲ್ಲೇ ಪಟಾಕಿ ತಯಾರಿ: ಮೂವರ ಬಂಧನ

ಪಟಾಕಿ ತಯಾರಿಸಲು ಬಳಸುವ ಸಾಮಗ್ರಿ ವಶಕ್ಕೆ

ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಟಾಕಿ ತಯಾರಿಸುತ್ತಿದ್ದ ಮೂರು ಮನೆಗಳ ಮೇಲೆ ಹೊನ್ನಾವರ ಪೊಲೀಸ್ ಠಾಣೆ ವತಿಯಿಂದ ದಾಳಿ ನಡೆಸಿ ಅಕ್ರಮವಾಗಿ ತಯಾರಿಸಿದ ಪಟಾಕಿ ಹಾಗೂ ಪಟಾಕಿ ತಯಾರಿಸಲು ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

11 ಅಡಿ ಉದ್ದದ ಬೃಹತ್ ಹೆಬ್ಬಾವು: ಯಶಸ್ವಿ ಕಾರ್ಯಾಚರಣೆ

ಕರ್ಕಿ ಗ್ರಾಮದ ಮೂರು ಮನೆಗಳ ಮೇಲೆ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಪಟಾಕಿ ತಯ್ಯಾರಿಸಲು ಬಳಸುತ್ತಿದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಹೆಗಡೆಹಿತ್ಲ ನಿವಾಸಿ ಅಮೀನಾಬಿ ಕೋಂ ಹಸನ್ ಸಾಬ್, ಮತ್ತು ನಡುಚಿಟ್ಟೆ ನಿವಾಸಿ ಖಾಸೀಮ್ ಹುಸೇನ್, ಹಾಗೂ ನಡುಚಿಟ್ಟೆಯ ಇಸ್ಮಾಯಿಲ್ ಯುಸೂಪ್ ಸಾಬ್ ಸೇರಿದಂತೆ ಮೂವರ ವಿರುದ್ದ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಸ್ಮಯ ನ್ಯೂಸ್‌ ಶ್ರೀ‌ಧರ್ ನಾಯ್ಕ ಹೊನ್ನಾವರ

Exit mobile version