Important
Trending

ಎದುರಿನಿಂದ ಬರುತ್ತಿದ್ದ ಕಾರು ತಪ್ಪಿಸಲು ಹೋಗಿ ಪೊಲೀಸ್ ವಾಹನ ಪಲ್ಟಿ

ಅದೃಷ್ಟವಶಾತ್ ತಪ್ಪಿತು ಪ್ರಾಣಾಪಾಯ

ಶಿರಸಿ: ಎದುರಿನಿಂದ ಬರುತ್ತಿದ್ದ ಕಾರೊಂದನ್ನು ತಪ್ಪಿಸಲು ಹೋಗಿ ಪೊಲೀಸ್ ವಾಹನವೊಂದು ಪಲ್ಟಿಯಾದ ಘಟನೆ ಶಿರಸಿ ಯಲ್ಲಾಪುರ ಮುಖ್ಯ ರಸ್ತೆಯ ಕಡವೆ ಕ್ರಾಸ್ ಹತ್ತಿರ ನಡೆದಿದೆ. ಕಾರವಾರದಿಂದ ಶಿರಸಿಗೆ ವಿಶೇಷ ಕರ್ತವ್ಯಕ್ಕಾಗಿ  ಪೊಲೀಸರು ಬರುತ್ತಿದ್ದಾಗ  ಕಡವೆ ಕ್ರಾಸ್ ಹತ್ತಿರ  ಈ ಘಟನೆ ಸಂಭವಿಸಿದೆ.

36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ

ಶಿರಸಿ ಕಡೆಯಿಂದ ಅತೀವೇಗವಾಗಿ ಕಾರೊಂದು ವಿರುದ್ಧ ದಿಕ್ಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸ್ ವಾಹನದ ಚಾಲಕ ಕಾರನ್ನು ತಪ್ಪಿಸಲು ಹೋಗಿ ಪಲ್ಟಿ ಹೋಡೆದಿದೆ ಎಂದು ತಿಳಿದು ಬಂದಿದೆ.ಈ ಅಪಘಾತದಲ್ಲಿ ವಾಹನದಲ್ಲಿದ್ದ ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

land for sale

Related Articles

Back to top button