ಉರುಳಿಬಿದ್ದ ಪೆಟ್ರೋಲ್ ಟ್ಯಾಂಕರ್: ಟ್ಯಾಂಕಿಗೆ ಹಾನಿಯಾಗಿ ಪೆಟ್ರೋಲ್ ಸೋರಿಕೆ

ಯಲ್ಲಾಪುರ: ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ನಿರಂತರವಾಗಿ ವಾಹನಗಳ ಅಪಘಾತ ಸಂಭವಿಸುತ್ತಲೇ ಇದೆ. ಇದೀಗ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ ಉರುಳಿಬಿದ್ದ ಘಟನೆ ಅರಬೈಲ್ ಘಟ್ಟದ ತಿರುವಿನಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಪೆಟ್ರೋಲ್ ಟ್ಯಾಂಕಿಗೆ ಹಾನಿಯಾಗಿ ಪೆಟ್ರೋಲ್ ಸೋರಿಕೆಯಾಗಿದೆ.

10ನೇ ತರಗತಿ ಪಾಸ್ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಆದರೆ ಅದೃಷ್ಟವಶಾತ್ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸಿ ಸಂಭಾವ್ಯ ದುರಂತವನ್ನು ತಪ್ಪಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಪೆಟ್ರೋಲ್ ಸೋರಿಕೆ ತಡೆದಿದ್ದಾರೆ. ಪೆಟ್ರೋಲ್ ತುಂಬಿದ ಲಾರಿ ಮಂಗಳೂರಿನಿoದ ಬೀದರ್ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version