Follow Us On

Google News
Important
Trending

ಹಳ್ಳದಲ್ಲಿ ಸ್ನಾನ‌ಮಾಡಲು ಹೋದ ಯುವಕ ನೀರಿನಲ್ಲಿ ಮುಳುಗಿ‌ ಸಾವು: ಪೇಂಟಿಂಗ್ ಕೆಲಸಕ್ಕೆ ಬಂದ ವೇಳೆ ದುರ್ಘಟನೆ

ಕುಮಟಾ: ಪೇಂಟಿಂಗ್ ಕೆಲಸಕ್ಕೆ ಬಂದ ಯುವಕ ಹಳ್ಳದಲ್ಲಿ ಸ್ನಾನ ಮಾಡಲು ಹೋದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಸಂತೇಗುಳಿಯ ಕೊಳೆಗೇರ್ ಕ್ರಾಸ್ ಬಳಿ ನಡೆದಿದೆ. ಹೌದು, ಮೃತ ಯುವಕ ತಾಲೂಕಿನ ಸಂತೆಗುಳಿಯ ಮನೆಯೊಂದರಲ್ಲಿ ಪೇಂಟಿಂಗ್ ಕೆಲಸಕ್ಕೆಂದು ತಂದೆ ಹಾಗೂ ಸಹೋದರನ ಜೊತೆ ಹುಬ್ಬಳ್ಳಿಯಿಂದ ಬಂದಿದ್ದ.

ತವರು ಮನೆಯಿಂದ ಗಂಡನ ಮನೆಗೆ ಹೋಗುತ್ತೇನೆಂದು ಹೋದ ಮಹಿಳೆ ನಾಪತ್ತೆ: ಈಕೆಯ ಕುರಿತು ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಿ

ಹಳೇ ಹುಬ್ಬಳ್ಳಿಯ ಟಿಪ್ಪು ನಗರ ನಿವಾಸಿ ಶಾಬಾಜ್ ಮಹಮ್ಮದ್ ಹನೀಫ್ ತೋಟಗೇರ್ ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಪೇಂಟಿಂಗ್ ಮುಗಿಸಿಕೊಂಡು ಸಹೋದರ ಮಲ್ಲಿಕ್ ರಿಹಾನ್ ಜೊತೆ ಸಂತೆಗುಳಿಯ ಕೊಳೆಗೇರ ಕ್ರಾಸ್ ಸಮೀಪದ ಹಳ್ಳದಲ್ಲಿ ಸ್ನಾನ ಮಾಡುತ್ತಿರುವ ವೇಳೆ ನೀರಿನಲ್ಲಿ ಮುಳುಗಿ ಈ ದುರ್ಘಟನೆ ನಡೆದಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಕುಮಟಾ

Back to top button