ಬಂದರಿನ ಧಕ್ಕೆ ಬಳಿ ಬೋಟಿನ ರೋಪ್ ಕಟ್ಟಲು ಹೋಗಿ  ನೀರುಪಾಲಾಗಿದ್ದ ಯುವಕ: ಆಸ್ಪತ್ರೆಗೆ ಸಾಗಿಸುವ ಮುಂಚೆಯೇ ಮೃತಪಟ್ಟ ದುರ್ದೈವಿ

ಅಂಕೋಲಾ : ಮೀನುಗಾರಿಕೆ ನಡೆಸಿ ವಾಪಸಾಗುವ ವೇಳೆ ಅಕಸ್ಮಾತ್ ಆಯತಪ್ಪಿ ನೀರಿಗೆ ಬಿದ್ದ ಮೀನುಗಾರ ಯುವಕನೋರ್ವ ಸಾವಿಗೀಡಾದ ಘಟನೆ ತಾಲೂಕಿನ ಬೆಲೇಕೇರಿ ಬಂದರಿನಲ್ಲಿ ನಡೆದಿದೆ. ವಿಜಯ ಮಾದೇವ ಬಾನಾವಳಿಕರ (24)  ಮೃತ ದುರ್ದೈವಿಯಾಗಿದ್ದಾನೆ. ರವಿವಾರ ಬೆಳಿಗ್ಗೆ ಬೋಟೊಂದರಲ್ಲಿ ಮೀನುಗಾರಿಕೆಗೆ ತೆರಳಿದ್ದ ವಿಜಯ ಭಾನಾವಳಿಕರ ಮೀನುಗಾರಿಕೆ ನಡೆಸಿ, ರಾತ್ರಿ ವಾಪಸಾಗುವಾಗ ಬೆಲೇಕೇರಿ ಬಂದರಿನ ಧಕ್ಕೆಗೆ ಬೋಟಿನ ರೋಪ್ ಕಟ್ಟಲು ಹೋಗಿ, ಆಯತಪ್ಪಿ ನೀರಿಗೆ ಬಿದ್ದಿದ್ದಾನೆ.

ಪರೇಶ್ ಮೇಸ್ತಾದು ಹತ್ಯೆಯಲ್ಲ, ಆಕಸ್ಮಿಕ ಸಾವು: ವರದಿ ಸಲ್ಲಿಸಿದ ಸಿಬಿಐ: ಸಿಬಿಐ ವರದಿಯಲ್ಲಿ ಏನಿದೆ ನೋಡಿ?

ಸ್ಥಳೀಯ ಮೀನುಗಾರರು ಆತನಿಗಾಗಿ ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ . ಸೋಮವಾರ ಬೆಳಿಗ್ಗೆ ಬಂದರಿನ ಧಕ್ಕೆಯ ಹತ್ತಿರದ ಸಮುದ್ರದಲ್ಲಿ ಆತ  ನ ದೇಹ ಪತ್ತೆಯಾಗಿ, ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಈ  ಕುರಿತು ಮೃತನ ಸಹೋದರ ನೀಡಿದ ದೂರಿನನ್ವಯ .ಅಂಕೋಲಾ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version