Follow Us On

WhatsApp Group
Important
Trending

ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ಸೋಂಕಿತರ ಸಂಖ್ಯೆ 356ಕ್ಕೆ ಏರಿಕೆ
ತಾಲೂಕಿನಲ್ಲಿ ಇಂದು ಆರು ಪ್ರಕರಣ ದೃಢ

ಹೊನ್ನಾವರ: ತಾಲೂಕಿನಲ್ಲಿ ಇಂದು ಆರು ಜನರಲ್ಲಿ ಕರೊನಾ ದೃಢಪಟ್ಟಿದೆ. ಹೊನ್ನಾವರ ಪಟ್ಟಣದ ಪ್ರಭಾತನಗರದಲ್ಲಿ ಎರಡು, ಕವಲಕ್ಕಿಯಲ್ಲಿ ಎರಡು, ಮಂಕಿ ಮತ್ತು ಕುದ್ರಗಿಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.


ಹೊನ್ನಾವರ ಪಟ್ಟಣದ ಪ್ರಭಾತನಗರದಲ್ಲಿ 57 ವರ್ಷದ ಪುರುಷ, 57 ಮಹಿಳೆ, ಕವಲಕ್ಕಿಯ 55 ವರ್ಷದ ಮಹಿಳೆ, 38 ವರ್ಷದ ಪುರುಷ, ಕುದ್ರಗಿಯ 67 ವಷದ ಮಹಿಳೆ, ಮಂಕಿ ಬಣಸಾಲೆಯ 54 ವರ್ಷದ ಪುರುಷ ಸೇರಿದಂತೆ ಇಂದು ಒಟ್ಟು ಆರು ಜನರಲ್ಲಿ ಕರೊನಾ ಕಾಣಿಸಿಕೊಂಡಿದೆ.

ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಆರು ಪ್ರಕರಣ ದೃಢಪಟ್ಟ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 356 ಕ್ಕೆ ಏರಿಕೆಯಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ 23 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 97 ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ

ದಿ ಭದ್ರಾ ಸೋಲಾರ್ ವಾಟರ್ ಹೀಟರ್
ವೆಂಕಿನ್ ಸೋಲಾರ್
7 ರಿಂದ 10 ವರ್ಷದ ಗ್ಯಾರಂಟಿ
ಕೈಗೆಟಕುವ ಬೆಲೆಯಲ್ಲಿ ಲಭ್ಯ
ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಾಡೆಕ್ಟ್
ಪರಿಸರ ಸ್ನೇಹಿಯಾಗಿದೆ
ಹಣ ಮತ್ತು ವಿದ್ಯುತ್ ಉಳಿಸಲು ಸಹಕಾರಿ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button