
ಯಲ್ಲಾಪುರ: ಪಟ್ಟಣದ ಸಬಗೇರಿಯ ಯುವಕನೊಬ್ಬ ರೈಲ್ವೆಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಇಲ್ಲಿ ಸಬಗೇರಿ ಜಡ್ಡಿ ನಿವಾಸಿ 24 ವರ್ಷದ ಯುವಕ ಗಿರೀಶ್ ದೇವಪ್ಪ ಯಾಮಕೆ ಮೃತಪಟ್ಟ ಯುವಕ. ಹೊಸಪೇಟೆ ತೋರಣಗಲ್ ಕಂಪನಿಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಯಲ್ಲಾಪುರ ಪ್ರೌಢ ಶಿಕ್ಷಣವನ್ನು ಪೂರೈಸಿ, ನಂತರ ಐಟಿಐ ಮುಗಿಸಿ ಜಿಂದಾಲ್ ಕಂಪೆನಿಗೆ ಕೆಲಸಕ್ಕೆ ಸೇರಿದ್ದ. ತನ್ನ ಮನೆಯಾದ ಯಲ್ಲಾಪುರಕ್ಕೆ ಬರುವ ಉದ್ದೇಶದಿಂದ ರೆಲ್ವೆಯಲ್ಲಿ ಬರುತ್ತಿದ್ದ ವೇಳೆ ರೈಲ್ವೆಯ ಬೋಗಿಯ ಬಾಗಿಲಲ್ಲಿ ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ವಿಸ್ಮಯ ನ್ಯೂಸ್, ಯಲ್ಲಾಪುರ









