ಅನ್ಯಕೋಮಿನ ಮೂವರು ಅಪರಿಚಿತರು ಬೈಕಿನಲ್ಲಿ ಬಂದು ಹಲ್ಲೆ ಮಾಡಿದ್ದಾರೆಂದು ಸುಳ್ಳು ಕೇಸ್: ಹಿಂದು ಸಂಘಟನೆಯ ಇಬ್ಬರು ಕಾರ್ಯಕರ್ತರ ಬಂಧನ

ಶಾoತಿ ಕದಡಲು ಸುಳ್ಳು ದೂರು ನೀಡಿರುವುದಾಗಿ ತಪ್ಪೊಪ್ಪಿಗೆ

ಭಟ್ಕಳ : ಅನ್ಯ ಕೋಮಿನ ಅಪರಿಚಿತ ಮೂವರು ವ್ಯಕ್ತಿಗಳು ಸ್ಕೂಟಿಯಲ್ಲಿ ಬಂದು ರಾಡ್ ಮತ್ತು ಚೈನ್ ನಿಂದ ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಸುಳ್ಳು ಪ್ರಕರಣ ದಾಖಲಿಸಿದ ಇಬ್ಬರು ಹಿಂದೂ ಸಂಘಟನೆಯ ಕಾರ್ಯಕರ್ತರುನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧನ ಕ್ಕೊಳಗಾದ ಇಬ್ಬರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು  ಶಿರಾಲಿಯ ನವೀನ ಸೋಮಯ್ಯ ನಾಯ್ಕ ಮತ್ತು ನವೀನ ವೆಂಕಟೇಶ ನಾಯ್ಕ ಎಂದು ತಿಳಿದು ಬಂದಿದೆ.

ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ಯುವತಿ: ನದಿಗೆ ಬಿದ್ದ ಯುವತಿಯನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ

ಇವರು ಮುರ್ಡೇಶ್ವರ ಹಾಗೂ ಭಟ್ಕಳ ಭಾಗದಲ್ಲಿ ಕೋಮು ಸಂಘರ್ಷ ಹುಟ್ಟಿಸಿ ಶಾಂತಿ ಕದಡಲು ಉದ್ದೇಶದಿಂದ ನವೀನ ಸೋಮಯ್ಯ ನಾಯ್ಕ ತಾನು ಅಕ್ಟೋಬರ್ 8 ರ ರಾತ್ರಿ ಮಾವಿನಕಟ್ಟೆಯಿಂದ ಮುರ್ಡೇಶ್ವರದ  ಕುಂಬಾರಕೇರಿಯಲ್ಲಿರುವ ತನ್ನ ಬಾಡಿಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಚಿಟ್ಟಿಹಕ್ಕಲು ಕ್ರಾಸ್ ಬಳಿ ಇರುವಾಗ ಟಿವಿಎಸ್ ಜೂಪಿಟರ್ ಸ್ಕೂಟಿಯಲ್ಲಿ ಬಂದ ವ್ಯಕ್ತಿಗಳು ರಾಡ್ ಮತ್ತು ಚೈನ್ ನಿಂದ ತನಗೆ ಹಲ್ಲೆಮಾಡಿ ಹೋಗಿದ್ದು ,ಅವರು ಹಿಂದಿ ಮಾತನಾಡುತಿದ್ದು  ಅದರಲ್ಲಿ ಓರ್ವ ಬಿಳಿ ಪಂಚೆ ಉಟ್ಟಿದ್ದು ಅನ್ಯಕೋಮಿನವರು ಎಂದು ಮುರ್ಡೇಶ್ವರ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದರು.

ಶಾoತಿ ಕದಡಲು ಸುಳ್ಳು ದೂರು ನೀಡಿರುವುದಾಗಿ ತಪ್ಪೊಪ್ಪಿಗೆ

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುರ್ಡೇಶ್ವರ ಪೊಲೀಸರು ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು,ಎಸ್ಪಿ ಡಾ. ಸುಮನ್ ಡಿ ಪೆನ್ನೆಕರ್ ಮತ್ತು ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಸಿಪಿಐ ಮಹಾಬಲೇಶ್ವರ ನಾಯಕ ತಂಡ ತನಿಖೆ ಆರಂಭಿಸಿದ್ದರು. ತನಿಖೆಯಲ್ಲಿ  ಈ ಇಬ್ಬರು ಆರೋಪಿಗಳು ವೈಯಕ್ತಿಕ ಕಾರಣಕ್ಕೆ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ನವೀನ ಸೋಮಯ್ಯ ನಾಯ್ಕ ನಿಗೆ ನವೀನ್ ವೆಂಕಟೇಶ ನಾಯ್ಕ ಕೀ ಚೈನ್ ನಿಂದ ತಲೆಗೆ ಹಲ್ಲೆ ನಡೆದಿರುವ ಬಗ್ಗೆ ತನಿಖೆಯಿಂದ ಪತ್ತೆಯಾಗಿದೆ.

ಸದ್ಯ ದೂರು ನೀಡಿದ ಹಿಂದೂ ಸಂಘಟನೆ ಕಾರ್ಯಕರ್ತ ನವೀನ ಭಟ್ಕಳದಲ್ಲಿ ಕೋಮು ಸಂಘರ್ಷ ಮೂಡಿಸಿ ಶಾಂತಿ ಕದಡಲು ಸುಳ್ಳು ದೂರು ನೀಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ, ಭಟ್ಕಳ

land for sale
Exit mobile version