ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ 40 ಕಲಾವಿದರ ಕೂಡುವಿಕೆಯಲ್ಲಿ ಅಕ್ಟೋಬರ್ 23 ರಂದು ಕತಗಾಲ ಯಕ್ಷೋತ್ಸವ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಜನಪ್ರಿಯ ಯಕ್ಷೋತ್ಸವಗಳಲ್ಲಿ ಒಂದಾದ ಕತಗಾಲ ಯಕ್ಷೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 23 ರ ಭಾನುವಾರದಂದು ಸಂಜೆ 4 ಗಂಟೆಯಿAದ ಕತಗಾಲದ ಎಸ್.ಕೆ.ಪಿ ಪ್ರೌಢಶಾಲೆಯ ಒಳಾಂಗಣ ರಂಗಮoದಿರದಲ್ಲಿ ಈ ಯಕ್ಷೋತ್ಸವ ನಡೆಯಲಿದೆ.

ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ 40 ಕಲಾವಿದರ ಕೂಡುವಿಕೆಯಲ್ಲಿ ಶ್ರೀರಂಗ ತುಲಾಭಾರ, ಶಿವ ಪಂಚಾಕ್ಷರಿ ಮಹಿಮೆ, ವೀರ ಮೌರ್ವಿಜ ಎಂಬ ಮೂರು ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ವೇಳೆ ಕತಗಾಲ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಕೂಡಾ ನಡೆಯಲಿದ್ದು , ಯಕ್ಷಗಾನ ಕಲಾವಿದರಾದ ಶ್ರೀ ಈಶ್ವರ ನಾಯ್ಕ ಮಂಕಿ ಇವರನ್ನು ಪುರಸ್ಕರಿಸಲಾಗುತ್ತಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version