Important
Trending

ಬೈಕ್ ಕದ್ದು ಗೋವಾದ ಗಡಿಭಾಗದಲ್ಲಿ ಕಡಿಮೆ ಬೆಲೆಗೆ ಮಾರಾಟ: ಆರೋಪಿಯ ಬಂಧನ

ಮುoಡಗೋಡ: ಪೆಟ್ರೋಲ್ ಪಂಪ್ ಮುಂದೆ ಇದ್ದ ಬೈಕ್ ಕಳುವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಬೈಕ್ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಬಡ್ಡಿಗೇರಿ ಗ್ರಾಮದ ವಿಠ್ಠು ಬೀರು ಎಡಗೆ ಸಂಬoಧಿ ಆರೋಪಿ. ಆರೋಪಿಯು ಬೈಕ್ ಕಳ್ಳತನ ಮಾಡಿಕೊಂಡು ಗೋವಾ ರಾಜ್ಯದ ಗಡಿ ಭಾಗದಲ್ಲಿ ಕಡಿಮೆ ಬೆಲೆಗೆ ಬೈಕ್‌ನ್ನು ಮಾರಾಟ ಮಾಡಿ ಬರುತ್ತಿದ್ದನು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಬೈಕ್ ಕಳುವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿಸ್ಮಯ ನ್ಯೂಸ್, ಕಾರವಾರ

Related Articles

Back to top button