ಕಾರವಾರದಲ್ಲಿ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ: ಆತಂಕ, ಗೊಂದಲಕ್ಕೆ ಒಳಗಾದ ಸ್ಥಳೀಯರು

ಕೋಸ್ಟ್ ಗಾರ್ಡ್ ಅಧಿಕಾರಿಗಳು ಹೇಳಿದ್ದೇನು?

ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ ನ ಹೆಲಿಕಾಪ್ಟರ್ ವೊಂದು ನಗರದ ಮೂರು ಕಡೆ ತುರ್ತು ಭೂ ಸ್ಪರ್ಶಕ್ಕೆ ಯತ್ನ ನಡೆಸಿದ್ದು ಸ್ಥಳೀಯರಲ್ಲಿ ಒಮ್ಮೆ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ನಗರದ ಮಾಲಾದೇವಿ ಮೈದಾನ, ಡಿಸಿ ಕಚೇರಿ ಎದುರಿಗಿನ ಫ್ಲೈ ಓವರ್ ಮೇಲೆ ಹಾಗೂ ಟ್ಯಾಗೋರ್ ಕಡಲತೀರದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ನ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಇಳಿಯಲು ಪ್ರಯತ್ನಿಸಿ ಪುನಃ ತೆರಳಿದೆ.

ಬೈಕ್ ಕದ್ದು ಗೋವಾದ ಗಡಿಭಾಗದಲ್ಲಿ ಕಡಿಮೆ ಬೆಲೆಗೆ ಮಾರಾಟ: ಆರೋಪಿಯ ಬಂಧನ

ಹೆಲಿಕಾಪ್ಟರ್ ತೀರಾ ಕೆಳಮಟ್ಟಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಒಮ್ಮೆ ಆತಂಕಕ್ಕೊಳಗಾಗಿದ್ದರು. ಏನು ನಡೆಯುತ್ತಿದೆ ಎನ್ನುವುದು ತಿಳಿಯದೆ ಗಾಬರಿಯಾದರು. ರಸ್ತೆ, ಕಡಲತೀರದಲ್ಲಿ ನಿಂತವರೆಲ್ಲ ಮೊಬೈಲ್ ಹಿಡಿದು ಫೋಟೋ, ವಿಡಿಯೋ ಮಾಡಿಕೊಂಡರು.

ಆದರೆ ಈ ಬಗ್ಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇದೊಂದು ಟ್ರೈಯಲ್ ಅಷ್ಟೆ. ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಅನ್ನು ಎಲ್ಲೆಲ್ಲಿ ಸುರಕ್ಷಿತವಾಗಿ ಇಳಿಸಬಹುದು ಎಂಬ ಬಗ್ಗೆ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದೇವೆ. ಅಂಕೋಲಾದ ಹಟ್ಟಿಕೇರಿ, ಕಾರವಾರದ ನಗರ ಭಾಗದಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version