ಮಹಿಳೆಯ ಹೊಟ್ಟೆಯಲ್ಲಿತ್ತು ಬೃಹತ್ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ

ಶಿರಸಿ: ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 10 ಕೆಜಿ ಗಡ್ಡೆಯನ್ನು ನಗರದ ಟಿ ಎಸ್ ಎಸ್ ಆಸ್ಪತ್ರೆ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ತೀವೃ ಹೊಟ್ಟೆನೋವಿನಿಂದ ಬಳತ್ತಿರುವ ಮಹಿಳಾ ರೋಗಿಯು ತಪಾಸಣೆಗೆಂದು ಟಿ ಎಸ್ ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬಂದಾಗ ತಪಾಸಣೆಮಾಡಿದ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿ ಗಡ್ಡೆ ಇರುವುದನ್ನ ಗುರುತಿಸಿದರು.

ಮೂವರು ಪುಟ್ಟ ಮಕ್ಕಳ ಜತೆ ನಾಪತ್ತೆಯಾದ ಮಹಿಳೆ ? ಕಾಣೆಯಾದ ತನ್ನ ಹೆಂಡತಿ ಮತ್ತು ಮಕ್ಕಳನ್ನು ಹುಡುಕಿ ಕೊಡುವಂತೆ ಪೊಲೀಸ್ ದೂರು

ನಂತರ ಕ್ಯಾನ್ಸರ್ ಶಸ್ತçಚಿಕಿತ್ಸಕರಾದ ಡಾ. ವಿಶ್ವಾಸ ಪೈ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಸ್ವಾತಿ ವಿನಾಯಕ ಮತ್ತು ಅರವಳಿಕೆ ತಜ್ಞರಾದ ಡಾ. ವಿನಾಯಕ ತೆಂಬದಮನಿ ಇವರುಗಳ ನೇತೃತ್ವದಲ್ಲಿ  ಶಸ್ತçಚಿಕಿತ್ಸಾ ಸಹಾಯಕರಾದ ಉಮೇಶ ಗೌಡ ಇವರ ಸಹಾಯದಿಂದ ಗರ್ಭಕೋಶದಿಂದ 10.5 ಕೆಜಿ ತೂಗುವ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿರುತ್ತಾರೆ. ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡು ಆಸೊತ್ರೆಯಿಂದ ಬಿಡುಗಡೆಹೊಂದಿದ್ದಾರೆ.

ಈಗಾಗಲೇ ಸುಮಾರು 100 ಕ್ಕೂ ಮಿಕ್ಕು ಇಂತಹ ಶಸ್ತçಚಿಕಿತ್ಸೆಗಳು ಆಸ್ಪತ್ರೆಯಲ್ಲಿ ನಡೆದಿದ್ದು ರೋಗಿಗಳಿಗೆ ಕಿಮೊಥೆರಪಿ ಸೇವೆಗಳನ್ನು ಕೂಡ ಒದಗಿಸುತ್ತಿದೆ. ಸ್ಥಳೀಯವಾಗಿ ಉನ್ನತ ವೈದ್ಯಕೀಯ ಸೇವೆಗಳನ್ನು ನೀಡುವ ಉದ್ದೇಶ ಹೊಂದಿರುವ ಸಂಸ್ಥೆಯು ತನ್ನ ಉದ್ದೇಶದತ್ತ ನಡೆಯುತ್ತಿರುವುದಕ್ಕೆ ಇದೊಂದು ನಿದರ್ಶನವಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

hitendra naik
Exit mobile version