ಯುವತಿಯ ಸಾಮಾಜಿಕ ಕಳಕಳಿ
ಜನರಲ್ಲಿ ಕರೊನಾ ಕುರಿತು ಜಾಗೃತಿ
ಕುಮಟಾ: ಸಾಮಾಜಿಕ ಚಿಂತನೆ, ಕಷ್ಟದಲ್ಲಿರುವವರಿಗೆ ನೆರವಾಗುವುದು, ಬೇರೆ ಬೇರೆ ಲೇಖನ ಬರಹಗಳನ್ನು ಬರೆಯುವುದು ಈ ಹವ್ಯಾಸ ಎಲ್ಲದರಲ್ಲಿಯೂ ಇರುವುದು ವಿರಳ, ಆದರೆ ಕುಮಟಾದ ಯುವತಿಯೋರ್ವಳು ಇವೆಲ್ಲವನ್ನೂ ಮೈಗೂಡಿಸಿಕೊಂಡು ಸೈ ಎನಿಸಿಕೊಂಡಿದ್ದಾಳೆ.. ಕುಮಟಾದ ಕಡ್ಲೆ ಓಣಿಯ ನಿವಾಸಿ ನಳೀನಾ ರಾಮದಾಸ ನಾಯಕ ಬಡತನಲ್ಲಿ ಬೆಳೆದು, ಇಂಜಿನಿಯರಿಂಗ್ ಪದವಿ ಮುಗಸಿ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಸಾಮಾಜಿಕವಾಗಿ ತೊಡಗಿಕೊಳ್ಳುವುದು, ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದು ಹೀಗೆ ಅನೇಕ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ. ಕರೋನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಕುಮಟಾಕ್ಕೆ ಬಂದು ನೆಲೆಸಿದ್ದು ಕರೋನಾ ಬಗ್ಗೆ ಜಾಗೃತಿ ಮೂಡಿಸುವುದು, ಮಾಸ್ಕ್ ಧರಿಸದೇ ಇರುವವರಿಗೆ ಮಾಸ್ಕ್ ನೀಡಿ ಧರಿಸುವಂತೆ ತಿಳಿಹೇಳುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ.. ಈಗಾಗಲೇ ಐದು ನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನು ಕುಮಟಾದ ಮಾರ್ಕೆಟ್ ಭಾಗಗಳಲ್ಲಿ ಅಂಗಡಿಕಾರರಿಗೆ, ಆಟೋ ಚಾಲಕರಿಗೆ, ಗ್ರಾಮೀಣ ಭಾಗದಿಂದ ಬಂದವರಿಗೆ ವಿತರಿಸಿ ಕರೋನಾ ಬಗ್ಗೆ ಎಚ್ಚರಿಕೆಯಿಂದ ಅಂತರ ಕಾಯ್ದುಕೊಂಡು ಇರುವಂತೆ ಜನರಲ್ಲಿ ವಿನಂತಿ ಮಾಡುತ್ತಿದ್ದಾರೆ. ಯುವತಿಯ ಈ ಕಾರ್ಯವನ್ನು ಕುಮಟಾದ ನಾಗರಿಕರು ಪ್ರಶಂಸಿಸಿದ್ದಾರೆ.
[sliders_pack id=”2570″]ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)