Follow Us On

Google News
Big News
Trending

ಸೋಂಕಿತೆಯನ್ನು ಆಸ್ಪತ್ರೆಗೆ ಕರೆ ತರಲು ಹರ ಸಾಹಸಪಟ್ಟ ಅಧಿಕಾರಿಗಳು

ಅಂಕೋಲಾದ ಸೋಂಕಿತರ ಸಂಖ್ಯೆ 72ಕ್ಕೆ ಏರಿಕೆ!
ಸೋಂಕಿತೆಯನ್ನು ಆಸ್ಪತ್ರೆಗೆ ಕರೆ ತರಲು ಹರ ಸಾಹಸಪಟ್ಟ ಅಧಿಕಾರಿಗಳು?
ಅಂಕೋಲಾ ಕೋವಿಡ್ ಹಾಸ್ಪಿಟಲ್‌ನಲ್ಲಿ ಗುಣಮುಖರಾದ 10 ಮಂದಿ ಬಿಡುಗಡೆ

[sliders_pack id=”1487″]

ಅಂಕೋಲಾ: ತಾಲೂಕಿನ ಸರಕಾರಿ ಆಸ್ಪತ್ರೆಯ ವೈದ್ಯರೊರ್ವರು, ಹಾರವಾಡ ಗ್ರಾಮದ 34ರ ಮಹಿಳೆ ಮತ್ತು 5ವರ್ಷದ ಬಾಲಕನಲ್ಲಿ ಗುರುವಾರ ಕರೊನಾ ಸೋಂಕು ದೃಢಪಟ್ಟಿದ್ದು ತಾಲೂಕಿನ ಒಟ್ಟು ಸೋಂಕಿತರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

ಕರೊನಾ ವಾರಿಯರ್ಸ್ಗಳ ಸೇವೆ ಶ್ಲಾಘನೀಯ: ನಿನ್ನೆ ಆರೋಗ್ಯ ಇಲಾಖೆಯ ಇಬ್ಬರು ಸ್ಟಾಪ್ ನರ್ಸ್, ಮತ್ತಿಬ್ಬರು ಡಿ ದರ್ಜೆ ಸಿಬ್ಬಂದಿಗಳಲ್ಲಿ ಕೋವಿಡ್-19 ದೃಢಪಟ್ಟಿದ್ದು ಅವರೆಲ್ಲರೂ ಕುಮಟಾ ಕೋವಿಡ್ ಹಾಸ್ಪಿಟಲ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡವರಾಗಿದ್ದರು. ಇಂದು ಸೋಂಕು ಕಾಣಿಸಿಕೊಂಡ ವೈದ್ಯರು ಸಹ ಕುಮಟಾದಲ್ಲಿಯೇ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾಗಿದ್ದು ಅವರನ್ನು ಪ್ರತ್ಯೇಕ(ಐಸೋಲೇಶನ್) ವಾಗಿಡಲಾಗಿದೆ ಎಂದು ತಿಳಿದುಬಂದಿದೆ. (©Copyright reserved by Vismaya tv)ತಮ್ಮ ವೈಯಕ್ತಿಕ ಆರೋಗ್ಯ ರಕ್ಷಣೆಯ ಸವಾಲಿನ ನಡುವೆಯೇ ಸಾರ್ವಜನಿಕರ ಆರೋಗ್ಯ ಕಾಳಜಿಗೆ ಮುಂದಾಗುವ ಕರೊನಾ ವಾರಿಯರ್ಸ್ ಯೋಧರ ಸೇವೆ ಶ್ಲಾಘನೀಯವಾಗಿದೆ. ಹಾರವಾಡದಲ್ಲಿ ಇಂದು ಕಂಡುಬoದ 2ಸೋಂಕಿನ ಪ್ರಕರಣಗಳಿಗೆ, ಈ ಹಿಂದಿನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಶಂಕೆ ಬಲಗೊಂಡಿದೆ. ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಮಾರ್ಗದರ್ಶನದಲ್ಲಿ ತಾಪಂ ಕಾರ್ಯಾನಿರ್ವಹಣಾಧಿಕಾರಿ ಪಿ.ವೈ ಸಾವಂತ, ತಾಲೂಕಾ ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯ್ಕ, ಹಾರವಾಡ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿ ಗಿರೀಶ ತಳವಾರ ಮತ್ತು ಕರೊನಾ ವಾರಿಯರ್ಸ್ ಸಿಬ್ಬಂದಿಗಳು ಮಾಹಿತಿ ಕಲೆ ಹಾಕುತ್ತಿದ್ದು ಹಲವು ಮುಂಜಾಗೃತೆ ಕೈಗೊಳ್ಳುವಂತೆ ಸೋಂಕು ಪ್ರದೇಶದ ಅಕ್ಕ ಪಕ್ಕದ ನಿವಾಸಿಗಳಿಗೆ ತಿಳಿ ಹೇಳುತ್ತಿದ್ದಾರೆ.

ಅಂತೂ ಆಸ್ಪತ್ರೆಗೆ ಬರಲೊಪ್ಪಿದ ಸೋಂಕಿತೆ: ಅದ್ಯಾವುದೋ ಕಾರಣದಿಂದ ಹಾರವಾಡದ ಸೋಂಕಿತ ಮಹಿಳೆ ತಾನು ಆಸ್ಪತ್ರೆಗೆ ಬರಲು ಸಾಧ್ಯವಿಲ್ಲ, ನನಗೆ ಮನೆಯಲ್ಲಿಯೇ ಉಳಿಯಬೇಕು ಎಂದು ಹಠ ಹಿಡಿದಿದ್ದಳು ಎನ್ನಲಾಗಿದೆ. (©Copyright reserved by Vismaya tv)ಅವರ ಮನೆಯಲ್ಲಿಯೇ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಲು ತೀರಾ ಕಷ್ಟದಾಯಕವಾಗಿದ್ದು, ಕುಟುಂಬದ ಚಿಕ್ಕ ಮಕ್ಕಳು ಮತ್ತಿತರರ ಆರೋಗ್ಯ ಸುರಕ್ಷಾ ದೃಷ್ಟಿಯಿಂದ, ತಹಶೀಲ್ದಾರ್ ಉದಯಕುಂಬಾರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಇ.ಸಿ ಸಂಪತ್ ಮತ್ತು ತಾಲೂಕಾ ಆರೋಗ್ಯಾಧಿಕಾರಿ ಡಾ|| ಅರ್ಚನಾ ನಾಯ್ಕ, ಮತ್ತಿತ್ತರ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿಯೇ ಹಾಜರಿದ್ದು, ಹಾರವಾಡದ ಮಹಿಳೆಗೆ ತಿಳಿ ಹೇಳಿ ಮನವೊಲಿಸಲು ಹರ ಸಾಹಸ ಪಟ್ಟರು ಎನ್ನಲಾಗಿದೆ.

ಕೋವಿಡ್ ಹಾಸ್ಪಿಟಲ್‌ನಿಂದ 10 ಮಂದಿ ಬಿಡುಗಡೆ: ಲಘು ರೋಗ ಲಕ್ಷಣಗಳುಳ್ಳ ಹಲವು ಸೋಂಕಿತರಿಗೆ ತಾಲೂಕಾ ಸರ್ಕಾರಿ ಆಸ್ಪತ್ರೆಯ ಮೇಲ್ಮಹಡಿಯಲ್ಲಿ ಆರಂಭಿಸಲಾದ ಕೋವಿಡ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೆ 32 ಸೋಂಕಿತರು ದಾಖಲಾಗಿದ್ದರು. ಸೋಂಕಿನಿoದ ಗುಣಮುಖರಾದ 10 ಜನರನ್ನು ಸಂಜೆಯ ವೇಳೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.(©Copyright reserved by Vismaya tv) ತಹಶೀಲ್ದಾರ್ ಉದಯಕುಂಬಾರ ಎಲ್ಲರಿಗೂ ಶುಭಕೋರಿದರು. ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ಮಹೇಂದ್ರ ನಾಯಕ, ಆರೋಗ್ಯಾಧಿಕಾರಿ ಡಾ|| ಅರ್ಚನಾ ನಾಯ್ಕ, ಕೋವಿಡ್ ವಾರ್ಡನ ವೈದ್ಯ ಈಶ್ವರಪ್ಪ, ಸಂತೋಷಕುಮಾರ, ರಮೇಶ, ರಾಜೇಶ ಸೌಮ್ಯಾ, ನರೇಂದ್ರ, ಆಸ್ಪತ್ರೆಯ ಪ್ರಯೋಗಾಲಯ, ಆಂಬ್ಯುಲೆನ್ಸ್ ಮತ್ತಿತರ ಸಿಬ್ಬಂದಿಗಳು ಹಾಜರಿದ್ದು, ಗುಣಮುಖರಾದ ಎಲ್ಲರಿಗೂ ಹೂವು ನೀಡಿ, ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

[sliders_pack id=”2570″]

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button
Idagunji Mahaganapati Chandavar Hanuman