ಯಲ್ಲಾಪುರ: ತಾಲೂಕಿನ ಶಿವಪುರದ ತೂಗು ಸೇತುವೆಯಮೇಲೆ ಕಾರು ಚಲಾಯಿಸಿ ಬೇಜವಾಬ್ದಾರಿತನ ಪ್ರದರ್ಶನ ಮಾಡಿದ್ದಲ್ಲದೆ, ದರ್ಪ ತೋರಿದ್ದ ವ್ಯಕ್ತಿಯನ್ನು ಜೋಯಿಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಉಳವಿ ನಿವಾಸಿ ಮುಜಾಹಿದ್ ಆಜಾದ್ ಸಯ್ಯದ್ (25) ಎಂದು ತಿಳಿದುಬಂದಿದೆ. ಸೇತುವೆ ಮೇಲೆ ಚಲಿಸುತ್ತಿದ್ದ ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ ತನಿಖೆ ನಡೆಸಿ, ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಕಾರು ಚಲಾಯಿಸಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
India Post Recruitment 2022: 18 ರಿಂದ 81 ಸಾವಿರ ಆರಂಭಿಕ ವೇತನ: SSLC & PUC ಆದವರು ಅರ್ಜಿ ಸಲ್ಲಿಸಬಹುದು
ಹೌದು, ತೂಗು ಸೇತುವೆ ಮೇಲೆ ಅಪರಿಚಿತರು ಕಾರನ್ನು ಚಲಾಯಿಸಿಕೊಂಡು ಬಂದಿದ್ದನ್ನು ನೋಡಿದ ಸ್ಥಳೀಯರು ಇದಕ್ಕೆ ಆಕ್ಷೇಪಿಸಿದ್ದು, ಆದರೆ, ಇದಕ್ಕೆ ಕಾರಿನಲ್ಲಿದ್ದವರು ದರ್ಪ ತೋರಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯರೆಲ್ಲರೂ ಸೇರಿ ಕಾರನ್ನು ಬಂದ ಹಾದಿಯಲ್ಲೇ ರಿವರ್ಸ್ ಗೇರಿನಲ್ಲಿ ವಾಪಸ್ ಕಳುಹಿಸಿದ್ದರು. ಅಹಾನುತವಾದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿತ್ತು. ಈ ಬಗ್ಗೆ ಉಳವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಅರ್ಜುನ ಮೊಕಾಶಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.
ವಿಸ್ಮಯ ನ್ಯೂಸ್, ಜೋಯ್ಡಾ