ಕಾರವಾರ: ಜಿಲ್ಲೆಯ ಖಡಕ್ ಪೊಲೀಸ್ ಆಫೀಸರ್ ಎಂದೇ ಹೆಸರಾಗಿದ್ದ ಎಸ್ಪಿ ಸುಮನ್ ಪೆನ್ನೇಕರ್ ವರ್ಗಾವಣೆಗೆ ಆದೇಶ ಹೊರಡಿಸಲಾಗಿದೆ. ಉ. ಕ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎನ್ . ವಿಷ್ಣುವರ್ಧನ್ ( K.N 2012) ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಕೆಲ ತಿಂಗಳುಗಳಿಂದ ಎಸ್ಪಿ ವರ್ಗಾವಣೆ ವಿಷಯದ ಕುರಿತು ಆಗಾಗ ಸುದ್ದಿಗಳು ಕೇಳಿ ಬರುತ್ತಿತ್ತಲ್ಲದೇ ಕೆಲ ಕಾಣದ ಕೈಗಳು ತಮ್ಮ ರಾಜಕೀಯ ಪ್ರಭಾವ ಬೀರಿ ಎಸ್ ಪಿ ವರ್ಗಾವಣೆಗೆ ಹುನ್ನಾರ ನಡೆಸುತ್ತವೆ ಎಂಬ ನಿಲುವನ್ನು ಖಂಡಿಸಿ, ಮಹಿಳಾ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾಯಿಸದಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರು.
India Post Recruitment 2022: 18 ರಿಂದ 81 ಸಾವಿರ ಆರಂಭಿಕ ವೇತನ: SSLC & PUC ಆದವರು ಅರ್ಜಿ ಸಲ್ಲಿಸಬಹುದು
ಕಳೆದ ಕೆಲದಿನಗಳ ಹಿಂದಷ್ಟೇ ಈ ಹಿಂದಿನ ಜಿಲ್ಲಾಧಿಕಾರಿ ಮುಲೈ ಮುಗಿಲನ್ ವರ್ಗಾವಣೆಗೊಂಡಿದ್ದು,ಎಸ್ ಪಿ ಸದ್ಯಕ್ಕೆ ವರ್ಗಾವಣೆಗೊಳ್ಳಲಾರರು ಎಂದು ಜನರ ಆಡಿಕೊಳ್ಳುತ್ತಿದ್ದರು.ಅಂತೆಯೇ ಇತ್ತೀಚಿಗಷ್ಟೇ ರಾಜ್ಯದ ವಿವಿಧ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿತ್ತಾದರೂ,ಅಲ್ಲಿ ಸುಮನ್ ಪೆನ್ನೇಕರ್ ಹೆಸರಿರದೇ ಅವರು ಮತ್ತಷ್ಟು ಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಾರೆ ಎನ್ನುವ ಭರವಸೆ ಮೂಡಿತ್ತು .
ಆದರೆ ಹಲವರ ನಿರೀಕ್ಷೆ ಸುಳ್ಳಾಗಿದ್ದು ಸರ್ಕಾರ ಎಸ್ ಪಿ ಸುಮನ್ ಪೆನ್ನೇಕರ್ ಅವರನ್ನು ವರ್ಗಾಯಿಸಿದ್ದು, ಜಿಲ್ಲೆಯ ಹಲವು ಪ್ರಜ್ಞಾವಂತರ ಪಾಲಿಗೆ ಇದು ನಿರಾಶೆಯ ಭಾವನೆ ಉಂಟು ಮಾಡಿದ್ದರೆ,ಮಹಿಳಾ ಅಧಿಕಾರಿಯ ಕಾಲಾವಧಿಯಲ್ಲಿ ಅಕ್ರಮ ದಂಧೆಗಳು ಬಹುತೇಕ ಹತೋಟಿಗೆ ಬಂದು, ಇನ್ನು ಮುಂದೆ ತಮ್ಮ ಕಳ್ಳಾಟ ನಡೆಯುವುದಿಲ್ಲ ಎಂದು ಬಾಲ ಮುದುಡಿಕೊಂಡಿದ್ದ ಕಳ್ಳದಂಧೆ ಕೋರರು ಖುಷಿಪಡುವಂತಾಗಿದೆ ಎನ್ನಲಾಗಿದೆ.
ಹಾಗಂತ ಈಗ ಬರುವ ಎಸ್ ಪಿ ವಿಷ್ಣುವರ್ಧನ್ ಸಹ ಖಡಕ್ ಆಫೀಸರ್ ಎಂದೇ ಹೇಳಲಾಗಿದ್ದು , ಕರಾವಳಿ ಜಿಲ್ಲೆ, ರಾಜ್ಯದ ರಾಜಧಾನಿ ಸೇರಿದಂತೆ ಇತರೆಡೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಹೆಸರಾಗಿದ್ದು , ಉ. ಕ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾರರು ಎನ್ನುತ್ತಾರೆ ಅವರನ್ನು ಬಲ್ಲವರು.
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ