ಕುಮಟಾ: ಮಂಗಳೂರಿನಿoದ ಲೋಕಾಪುರಕ್ಕೆ ತೆರಳುತ್ತಿದ್ದ ಸಿಮೆಂಟ್ ಮಿಕ್ಸಿಂಗ್ ಟ್ಯಾಂಕರ್ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿoದ ಗುದ್ದಿದ ರಬಸಕ್ಕೆ ಟ್ಯಾಂಕರ್ ಮುಂಭಾಗ ಪೂರ್ತಿ ಜಕಮ್ ಆಗಿ, ಟ್ಯಾಂಕರ್ ಚಾಲಕನ ದೇಹ ಸಿಕ್ಕಿ ಹಾಕಿ ಕೊಂಡ ಘಟನೆ ಕುಮಟಾ ಬೆಟ್ಕುಳಿಯಲ್ಲಿ ನಡೆದಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಜೀವ ಉಳಿಸಿ ಅಂತ ಒದ್ದಾಡುತ್ತಿದ್ದ ಟ್ಯಾಂಕರ್ ಚಾಲಕನ ಜೀವ ಉಳಿಸಿದ್ದಾರೆ.
ಹೌದು, ಚಾಲಕನನ್ನು ಜೀವಂತವಾಗಿ ಹೊರಗೆ ತೆಗೆಯೋದು ತುಂಬಾ ಕಷ್ಟದ ಸನ್ನಿವೇಶದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರ ಸಾಹಸ ಪಟ್ಟಿ ಚಾಲಕನನ್ನು ಜೀವಂತ ರಕ್ಷಣೆ ಮಾಡಿದ್ದಾರೆ. ಚಾಲಕನ ಕಾಲಿಗೆ ಗಂಭೀರಗಾಯವಾಗಿದ್ದು, ಆಂಬುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಾಲಕನ ಜೀವ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಟಿ. ಎನ್. ಗೊಂಡ, ಚಾಲಕ ರಾಜೇಶ ನಾಯಕ,ಪ್ರಮುಖ ಅಗ್ನಿಶಾಮಕ ಸಂದೀಪ ನಾಯಕ, ಸಿಬ್ಬಂದಿಗಳಾದ ರಾಜೇಶ ಮಡಿವಾಳ , ಚಂದ್ರ ಮೊಗೇರ, ಚಂದ್ರಶೇಖರ ಗೌಡ, ಶಂಕರಪ್ಪ ಕೊರವರ ಅವರು ಹಾಗು ಅಲ್ಲಿನ ಸ್ಥಳೀಯರು ಇದ್ದರು.
ವಿಸ್ಮಯ ನ್ಯೂಸ್, ಕುಮಟಾ