Focus NewsImportant
Trending

ಆರ್ಮಿ ಆಫಿಸರ್ ಹೆಸರಿನಲ್ಲಿ ವಂಚನೆ: ಹಣ ಪಡೆದು ಪಂಗನಾಮ ಹಾಕಿದ್ದ ಓರ್ವನ ಬಂಧನ

ಕಾರವಾರ: ಆರ್ಮಿಯ ಉನ್ನತಾಧಿಕಾರಿ ಎಂದು  ಹೇಳಿ ಉದ್ಯೋಗ ಕೊಡಿಸಲು ವಂಚಿಸುತ್ತಿದ್ದ ಫೇಕ್ ಆರ್ಮಿ ಪರ್ಸನ್ ಓರ್ವನನ್ನು ಬಂಧಿಸಿರುವ ಘಟನೆ‌ ಸಿದ್ದರದಲ್ಲಿ ನಡೆದಿದೆ.  ಕಾರವಾರ ಸಿದ್ಧರ ನಿವಾಸಿ ವಿನಾಯಕ ಮಹಾಲೆ ಬಂಧಿತ ಆರೋಪಿ. ಈತ ಲೆಫ್ಟಿನೆಂಟ್ ಕರ್ನಲ್ ರ್ಯಾಂಕಿಂಗ್ ಯೂನಿಫಾರ್ಮ್ ಧರಿಸಿಕೊಂಡು ಅಡ್ಡಾಡುತ್ತಿದ್ದ. ಅಲ್ಕದೆ ಕಡವಾಡ ಮಾರುತಿ ನಗರದ ಹೇಮಲತಾ ಎಂಬವರ ಮಗನಾದ ಪ್ರಸಾಸ್ ಎಂಬಾತನಿಗೆ ನೌಕಾನೆಲೆಯಲ್ಲಿ ಗುಮಾಸ್ತನ ಕೆಲಸ ಕೊಡಿಸುವುದಾಗಿ 35 ಸಾವಿರ ರೂ. ಹಾಗೂ ಇನ್ನೋರ್ವನಿಂದ 66 ಸಾವಿರ ರೂ. ಸೇರಿದಂತೆ ಹಲವರಿಂದ ಹಣ ಪಡೆದು ಪಂಗನಾಮ ಹಾಕಿದ್ದ.‌ ಅಲ್ಲದೆ ಮತ್ತೊಬ್ಬರಿಂದಲೂ ಉದ್ಯೋಗ ಕೊಡಿಸುವುದಾಗಿ 4 ಲಕ್ಷ ರೂ. ಪಡೆದು ವಂಚಿಸಲು ಯತ್ನಿಸಿದ್ದರೂ ಸಾಧ್ಯವಾಗದೇ ಮರಳಿಸಿದ್ದ ಎನ್ನಲಾಗಿದೆ. 

ಆಸ್ತಿ ವಿವಾದ: ಅಣ್ಣನನ್ನೇ ಕೊಲೆ ಮಾಡಿದ ತಮ್ಮಂದಿರು: ಆಗಿದ್ದೇನು ನೋಡಿ?

ಕಳೆದ ಒಂದೆರಡು ವಾರಗಳಿಂದ ಈತನ ಮೇಲೆ ನಿಗಾ ಇರಿಸಿದ್ದ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಆರೋಪಿ ಬಂಧಿಸಿದ್ದಾರೆ. ಆರೋಪಿಯ ಮನೆಯನ್ನು ಹುಡುಕಾಡಿದಾಗ 66 ರೂ.ನಗದು ಹಣ ಲಭ್ಯವಾಗಿದೆ. ಆರೋಪಿ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯೂ ಆರ್ಮಿ ಹೆಸರಿನಲ್ಲಿ ಹಣ ಮಾಡುವುದಕ್ಕಾಗಿ ಈ ರಿತಿ ಮಾಸ್ಟರ್ ಪ್ಲ್ಯಾನ್ ಹಾಕಿಕೊಂಡಿದ್ದ ಈ ಹಿಂದೆ ಆರೋಪಿಯೂ ಬೆಳಗಾವಿ ಕಮಾಂಡೋ ಟ್ರೈನಿಂಗ್ ಸ್ಕೂಲ್‌ನಲ್ಲಿ ಮರಾಠಾ ಲೈಟ್ ಇನ್‌ಫೆಂಟ್ರಿ ವಿಭಾಗದಡಿ ಹೆಲ್ಪಿಂಗ್ ಬಾಯ್ ಆಗಿ ಸ್ವೀಪಿಂಗ್ ಕೆಲಸ ಮಾಡುತ್ತಿದ್ದ.

ಅಲ್ಲೇ ಅಧಿಕಾರಿಗಳ ರ್ಯಾಂಕಿಂಗ್, ಅವರ ಯೂನಿಫಾರ್ಮ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದ. ಬಳಿಕ ಆ ಕೆಲಸವನ್ನು ಬಿಟ್ಟು 2015-16ರ ವೇಳೆ ಆರ್ಮಿ ಆಫಿಸರ್ ಯೂನಿಫಾರ್ಮ್ ಖರೀದಿಸಿ 2020ರಿಂದ ಅಧಿಕಾರಿಯ ಹೆಸರು ಹೇಳಿ ಅಡ್ಡಾಡುತ್ತಿದ್ದ. ಕಾರವಾರ ಹಾಗೂ ಗೋವಾ ಭಾಗದಲ್ಲಿ ಹಲವರಿಗೆ ಈತ ಮೋಸ ಮಾಡಿರುವುದಾಗಿ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಕೊನೆಗೂ ಜಾಲ ಬೇದಿಸಿದ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button