Important

ಅಂಗಡಿ ಮುಂದೆ ನಿಲ್ಲಿಸಿಟ್ಟ ಬೈಕ್ ಕಳ್ಳತನ : ಮನೆಯಲ್ಲಿಟ್ಟ ಬೈಕ್ ಕಳ್ಳತನಕ್ಕೂ ವಿಫಲ ಯತ್ನ: ಸೈಕಲ್ ಬಿಟ್ಟು ರೇನ್ ಕೋಟ್ ಕದ್ದೊಯ್ದ ಕಳ್ಳರಾರು ?

ಅಂಕೋಲಾ: ಅಂಗಡಿ ಎದುರು ನಿಲ್ಲಿಸಿಟ್ಟ ಬೈಕ್ ಕಳ್ಳತನಕ್ಕೆ ಸಂಭವಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ರವಿವಾರ ದೂರೊಂದು ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ -ಕುಮಟಾ ರಸ್ತೆಯ ವಂದಿಗೆ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದ್ದು, ಹೆದ್ದಾರಿ ಪಕ್ಕದ ನಿವಾಸಿ ರಾಜೇಶ ಶಿವಾನಂದ ಶೆಟ್ಟಿ(59) ಎನ್ನುವವರಿಗೆ ಸೇರಿದ್ದ ಕೆ.ಎ 30 ಜೆ 1085 ನೋಂದಣಿ ಸಂಖ್ಯೆಯ ಹೀರೊ ಹೊಂಡಾ ಸ್ಪ್ಲೆಂಡರ ಮೋಟರ ಬೈಕ್ ಕಳ್ಳತನವಾಗಿದೆ.

ಶೆಟ್ಟಿ ಅವರ ಮನೆಯ ಮುಂಬದಿಗೆ ಮಂಜುನಾಥ ಸ್ಟೋರ್ಸ್ ಹೆಸರಿನ ಅವರದೇ ಅಂಗಡಿ ಇದ್ದು , ನಿರ್ಮಾಣ ಹಂತದಲ್ಲಿರುವ ಕಟ್ಟಡ ಮತ್ತಿತರ ಕಾರಣಗಳಿಂದ ಅವರು ತಮ್ಮ ಬೈಕನ್ನು ಅಂಗಡಿ ಎದುರೇ ನಿಲ್ಲಿಸಿಟ್ಟಿದ್ದು, ಕಳ್ಳರಾರೋ ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂಕೋಲಾ ಪಿ.ಎಸ್. ಐ ಜಯಶ್ರೀ ಪ್ರಭಾಕರ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಕಳ್ಳಕೃತ್ಯದ ದೃಶ್ಯಾವಳಿಗಳು ಸಿ.ಸಿ.ಕ್ಯಾಮರಾದಲ್ಲಿ ಸೆರೆ ಆಗಿದೆ ಎನ್ನಲಾಗಿದ್ದು, ಪೋಲೀಸರು ಕಳ್ಳರನ್ನು ಶೀಘ್ರವೇ ಪತ್ತೆ ಹಚ್ಚುವರೇ ಕಾದು ನೋಡಬೇಕಿದೆ.

ಮನೆಯಲ್ಲಿಟ್ಟ ಬೈಕ್ ಕಳ್ಳತನಕ್ಕೂ ವಿಫಲ ಯತ್ನ

ಈ ಬೈಕ್ ಕಳ್ಳತನ ನಡೆದ ಅತೀ ಹತ್ತಿರದಲ್ಲೇ ಪ್ರತ್ಯೇಕ ಮತ್ತೊಂದು ಘಟನೆಯಲ್ಲಿ ಬೈಕ್ ಕಳ್ಳತನದ ವಿಫಲ ಯತ್ನ ಒಂದು ನಡೆದಿದೆ. ಎನ್ನಲಾಗಿದೆ. ವಂದಿಗೆ ಐ.ಬಿ ಎಂದು ಕರೆಸಿಕೊಳ್ಳುವ ಪರೀವಿಕ್ಷಣಾ ಮಂದಿರಕ್ಕೆ ಹೋಗುವ ಹೆದ್ದಾರಿಯಂಚಿನ ಅಡ್ಡ ತಿರುವಿನ ರಸ್ತೆಗೆ ಹೊಂದಿಕೊಂಡು, ಎಸ್ ಸಿ ಕುಟುಂಬಗಳು ವಾಸವಾಗಿರುವ ಕಾಂಪೌಂಡ್ ಒಂದರಲ್ಲಿ, ಮನೆ ಬಳಿ ನಿಲ್ಲಿಸಿಟ್ವ ಬೈಕ್ ನ್ನು ಅದಾರೋ ಕಳ್ಳರು ಕದ್ದು ಸಾಗಿಸುವ ವಿಫಲ ಯತ್ನ ನಡೆಸಿದ್ದಾರೆ. ಬೈಕ್ ಮಾಲಕ ತನ್ನ ದ್ವಿಚಕ್ರ ವಾಹನದ ಹ್ಯಾಂಡಲ್ ಲಾಕ್ ಮಾಡಿಟ್ಟಿದ್ದರಿಂದ ಕಳ್ಳರಿಗೆ ಬೈಕ್ ನ್ನು ಸಲೀಸಾಗಿ ಎತ್ತುಕೊಂಡು ಹೋಗಲಾಗದೇ, ಹ್ಯಾಂಡಲ್ ಲಾಕ್ ತೆಗೆಯುವ ಯತ್ನ ಅಥವಾ ಬೈಕ್ ಕದ್ದೊಯ್ಯುವಾಗ ನಾಯಿಯ ಬೊಗಳುವಿಕೆಯಿಂದ ಜನರು ಎಚ್ಚರಗೊಳ್ಳಬಹುದೆಂಬ ಹೆದರಿಕೆಯಿಂದಲೋ ಬೈಕ್ ನ್ನು ಸ್ವಲ್ಪ ದೂರದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ..

ಪಕ್ಕದ ಮನೆಯ ಸೈಕಲ್ ಒಂದನ್ನೂ ಇದೇ ಸಂದರ್ಭದಲ್ಲಿ ಕದ್ದೊಯ್ಯುವ ಯತ್ನವನ್ನು ಮಾಡಿದಂತಿದ್ದು, ಅದೂ ಸಾಧ್ಯವಾಗದೇ ಹತ್ತಿರವೇ ಇದ್ದ ರೇನ್ ಕೋಟ್ ಒಂದನ್ನು ಮಾತ್ರ ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತು ಅಕ್ಕ -ಪಕ್ಕದ ಮನೆಯವರೇ ಮಾತನಾಡಿಕೊಂಡತ್ತಿದ್ದು, ಪೊಲೀಸರು ಈ ಕುರಿತೂ ಮಾಹಿತಿ ಕಲೆಹಾಕಬೇಕಿದೆ.

ಶೆಟ್ಟಿ ಅವರ ಬೈಕ್ ಕಳ್ಳತನ ಕೃತ್ಯ ಹಾಗೂ ಪ್ರತ್ಯೇಕ ಇನ್ನೊಂದು ಬೈಕ್ ಕಳ್ಳತನ ವಿಫಲ ಯತ್ನದಲ್ಲಿ ಸ್ಥಳೀಯರ ಕೈವಾಡ ಇರಬಹುದೇ ಅಥವಾ ಹೆದ್ದಾರಿಯ ಮೇಲೆ ಬಂದು ಕಳ್ಳತನ ಮಾಡಿ ಪರಾರಿಯಾಗಿ ಬಿಡುವ ಬೇರೆಯದೇ ಜಾಲ ಸಕ್ರೀಯವಾಗಿದೆಯೇ ? ತಾಲೂಕು ಅಥವಾ ಇತರೆಡೆ ಹೆದ್ದಾರಿಯ ಯಾವುದಾದರೂ ಪ್ರದೇಶದಲ್ಲಿ ಇಂತಹ ಬೇರೆ ಘಟನೆಗಳು ನಡೆದಿದೆಯೇ ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ಚುರುಕಿನ ತನಿಖೆ ಕೈಗೊಂಡು,ಕಳ್ಳತನದ ಕೃತ್ಯದ ಹಿಂದಿರುವ ಅಸಲಿ ಮುಖಗಳನ್ನು ಕಂಡುಹಿಡಿದು ಕಾನೂನು ರೀತಿಯ ಶಿಕ್ಷೆಗೆ ಗುರಿಪಡಿಸುವಂತಾಗಬೇಕು ಎನ್ನುವುದು ಪ್ರಜ್ಞಾವಂತರ ಆಗ್ರವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button