Focus News
Trending

ಪ್ರಥಮ ಕೃತಿ ನಾರದೀಯ ಸಂಗೀತ : ಡಾ. ಎಮ್. ಪ್ರಭಾಕರ ಜೋಶಿ

ಕುಮಟಾ: ಕತಗಾಲದಂತಹ ಗ್ರಾಮೀಣ ಸಂಸ್ಥೆಯೊoದು ಸಂಗೀತ ಪರಂಪರೆಯ ವಿಶಿಷ್ಟ ಕೃತಿಯೊಂದನ್ನು ಪ್ರಕಟಿಸಿರುವುದು ಅದ್ಭುತವಾಗಿದೆ. ಇದು ಸಂಗೀತಕ್ಕೆ ನಾರದರ ಕೊಡುಗೆ ಅಪಾರ. ಆಧುನಿಕ ಸಂಗೀತದೊoದಿಗೆ ನಾರದೀಯ ಶಿಕ್ಷಾಗ್ರಂಥದ ವಿಷಯದೊಂದಿಗೆ ಸಮನ್ವಯಗೊಳಿಸಿರುವುದು ಬಹು ಸಮಂಜಸವಾಗಿದೆ ಎಂದು ಡಾ. ಎಮ್. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ಅವರು ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿರುವ ಹಾಗೂ ಸಂಸ್ಕೃತ-ಸoಗೀತ ವಿದ್ವಾನ್ ಡಾ. ಕೆ ಗಣಪತಿ ಭಟ್ಟರ ಮಾರ್ಗರ್ಶನದಲ್ಲಿ ರೋಹಿಣಿ ನಾಗೇಂದ್ರ ಸಂಪಾದಿಸಿರುವ `ನಾರದೀಯ ಸಂಗೀತ’ ಪುಸ್ತಕವನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ವಿಶ್ವೇಶತೀರ್ಥ ಸಭಾಭವನದಲ್ಲಿ ಲೊಕಾರ್ಪಣೆ ಮಾಡಿ ಮಾತನಾಡುತ್ತ ಬಹುಶಃ ಕನ್ನಡದಲ್ಲಿ ಇಂಥದೊoದು ಕೃತಿಯ ಅನಿವಾರ್ಯತೆ ಇತ್ತು. ಚಿಕ್ಕದಾದರೂ ಈ ಹೊತ್ತಿಗೆ ಚೊಕ್ಕದಾಗಿದೆ. ಭಾಗವತದ ಶ್ಲೋಕಗಳನ್ನು ಮತ್ತು ಕೆಲವು ಸ್ತೋತ್ರಗಳನ್ನು ವಿವಿಧ ರಾಗಗಳಲ್ಲಿ ಸಂಯೋಜಿಸಿ ಪ್ರಕಟಿಸಿರುವುದು ವಿಶೇಷತೆಯಾಗಿದೆ ಎಂದರು.

ಧ್ವನಿಮುದ್ರಿಕೆಯನ್ನು ಲೋಕಾರ್ಪಣೆ ಮಾಡಿದ ಸಂಸ್ಕೃತ ವಿದ್ವಾಂಸ ಉಮಾಕಾಂತ ಭಟ್ಟ ಮಾತನಾಡಿ ಭಾಷೆಯ ಪರಿಶುದ್ಧತೆಗೆ ಪ್ರಾಚೀನ ಶಿಕ್ಷಾಗ್ರಂಥ ಬಹುಮಾನ್ಯವಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸಾಮಗಾನಕ್ಕೆ ಮೀಸಲಾದ ನಾರದೀಯ ಶಿಕ್ಷಾ ಲಕ್ಷಣವನ್ನು ಸಂಗೀತದ ಹಿನ್ನೆಲೆಯಲ್ಲಿ ಸಂಶೋಧನಾತ್ಮಕವಾಗಿ ಪ್ರಕಟಿಸಿರುವುದು ಸುಭದ್ರವಾಗಿದೆ. ಪುಸ್ತಕಕ್ಕೆ ಅನುಗುಣವಾಗಿ ವಿವಿಧ ರಾಗಗಳಲ್ಲಿ ಸಂಯೋಜಿಸಿ ಧ್ವನಿಮುದ್ರಿಕೆಯ ರೂಪ ಕೊಟ್ಟಿರುವುದು ಮತ್ತೂ ವಿಶೇಷವಾಗಿದೆ. ಸಂಗೀತಕ್ಷೇತ್ರಕ್ಕೆ ಇದು ಪರ್ವಕಾಲ. ಗಾನ-ವಾದನ ಕೌಶಲದೊಂದಿಗೆ ನಿರಂತರವಾಗಿ ಸಂಗೀತ ವಿಷಯಗಳನ್ನು ವಿಮರ್ಶಿಸಿ ಗ್ರಂಥ ರಚನೆ ಮಾಡುತ್ತಿರುವ ರೋಹಿಣಿಯವರು ಆದರ್ಶ ಯುವ ಲೇಖಕರು. ಸಂಸ್ಕೃತ-ಸAಗೀತ ಉಭಯ ಕ್ಷೇತ್ರಗಳಿಗೂ ಸಮಾಧಾನಪಡಿಸುವ ಕಾರ್ಯ ಇದಾಗಿದೆ ಎಂದರು. .

ವೇದಿಕೆಯಲ್ಲಿ ಯಕ್ಷಗಾನ ಕಲಾವಿದರಾದ ಜಬ್ಬಾರ ಸಮೋ, ಭಾಗವತರಾದ ವಿದ್ವಾನ್ ಗಣಪತಿ ಭಟ್ಟ, ಅನಂತ ಪದ್ಮನಾಭ ಫಾಟಕ, ಸಂಕದಗುoಡಿ ಗಣಪತಿ ಭಟ್ಟ ಉಪಸ್ಥಿತರಿದರು. ಡಾ ಕೆ. ಗಣಪತಿ ಭಟ್ಟ ಪ್ರಾಸ್ತಾವಿಕ ನುಡಿದರು. ಅಜಿತ ಕಾರಂತ ಅತಿಥಿಗಳನ್ನು ಪರಿಚಯಿಸಿದರು. ಎಚ್.ಎನ್ ಅಂಬಿಗ ಸ್ವಾಗತಿಸಿದರು. ಎಮ್.ಆರ್.ಅರುಣಕುಮಾರ ನಿರೂಪಿಸಿದರು. ಶ್ರೀಪಾದ ಸಿಂಗನಮಲ್ಲಿ ವಂದಿಸಿದರು. ಸುವರ್ಣಾ ದೇಸಾಯಿ, ಸುಮಂಗಲಾ ಭಟ್ಟ, ಪ್ರತಿಭಾ ಪ್ರಸಾದ ಭಾಗವತದ ಶ್ಲೋಕಗಳನ್ನು ದುರ್ಗಾ ರಾಗದಲ್ಲಿ ಹಾಡಿದರು.

ತಾಳಮದ್ದಳೆ: ಅನಂತರ `ಭಕ್ತ ವೀರಮಣಿ’ ಎಂಬ ಯಕ್ಷಗಾನ ತಾಳಮದ್ದಳೆಯನ್ನು ಕಲಾವಿದರು ನಾಲ್ಕು ಗಂಟೆಗಳ ಕಾಲ ರಸಮಯವಾಗಿ ಮತ್ತು ವಿದ್ವತ್ಪೂರ್ಣವಾಗಿ ನಡೆಸಿಕೊಟ್ಟರು. ನಾಗೇಂದ್ರ ಚಂದಗುಳಿ, ಆದಿತ್ಯ ಕಾಂಬಳೆ, ವೆಂಕಟೇಶ ಪುರೋಹಿತ, ಅನಂತ ಹರಿಹರ, ರಾಜಶೇಖರ ಹೆಗಡೆ, ಗಿರಿಜಾ ಅರುಣಕುಮಾರ ಸಂಧ್ಯಾ ಫಾಟಕ, ಜಗದೀಶ ಬುರ್ಡೆ ಮುಂತಾದ ನೂರಾರು ಸಾಹಿತ್ಯ-ಸಂಗೀತ ಶ್ರೋತೃಗಳಿಗೆ ಇದೊಂದು ರಸಾಸ್ವಾದನೆ ಹಬ್ಬವಾಯಿತು.

Back to top button