ಹೊನ್ನಾವರ: ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಭಗವದ್ಗೀತಾ ಅಭಿಯಾನದ ಪ್ರಯುಕ್ತ “ಭಗವದ್ಗೀತಾ” ಪಠಣ ಕೇಂದ್ರವನ್ನು ಉದ್ಘಾಟಿಸಲಾಯಿತು. ಶ್ರೀ ಚೆನ್ನಕೇಶವ ಫ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಎಲ್.ಎಮ್ ಹೆಗಡೆಯವರು ದೀಪವನ್ನು ಬೆಳಗಿಸಿ ಭಗವದ್ಗೀತಾ ಪಠಣ ಕೇಂದ್ರವನ್ನು ಉದ್ಘಾಟಿಸಿ ಭಗವದ್ಗೀತೇಯು ಹಿಂದೂಗಳ ಅಸ್ಮಿತೆಯಾಗಿದ್ದು ಅದನ್ನು ಪ್ರತಿಯೋಬ್ಬರೂ ಓದಬೇಕು. ಭಗವದ್ಗೀತೆಯನ್ನು ಪಠಿಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಉಂಟಾಗುತ್ತದೆ.
ಆಟವಾಡಲು ತೆರಳಿದ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು: ಮುಗಿಲು ಮುಟ್ಟಿದ ಆಕ್ರಂದನ
ಪ್ರತಿಯೊಬ್ಬ ಮನುಷ್ಯನಿಗೂ ಭಗವಂತನ ಕೃಪೆ ಬೇಕೆ ಬೇಕು ಅದೊಂದಿದ್ದರೆ ಮೂಕನು ಮಾತನಾಡಬಹುದು ಕುಂಟನು ಪರ್ವತವನ್ನು ಏರಬಹುದು ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಕೃತ ಶಿಕ್ಷಕರಾದ ಶ್ರೀ ಸುಬ್ರಹ್ಮಣ್ಯ ಭಟ್ಟ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಗೀತಾ ಅಭಿಯಾನದ ಉದ್ದೇಶ ಭಗವದ್ಗೀತೆಯ ಐದನೇ ಅಧ್ಯಾಯದ ಮಹತ್ವದ ಕುರಿತು ವಿವರಿಸಿದರು ಶಾಲೆಯ ಎಲ್ಲ ಶಿಕ್ಷಕರುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಹೊನ್ನಾವರ