Focus NewsImportant
Trending

ಫೆಬ್ರವರಿ 22ರಿಂದ ಯಲ್ಲಾಪುರ ಗ್ರಾಮದೇವಿ ಜಾತ್ರೆ ಆರಂಭ: ಸಮಿತಿ ಸಭೆಯಲ್ಲಿ ತೀರ್ಮಾನ

ಯಲ್ಲಾಪುರ: ಪಟ್ಟಣದ ಕಾಳಮ್ಮ, ದುರ್ಗಮ್ಮ ಗ್ರಾಮ ದೇವಿಯರ ಜಾತ್ರೆ ಫೆಬ್ರವರಿ 22 ರಿಂದ ಒಂಬತ್ತು ದಿನಗಳ ಕಾಲ ನಡೆಯಲಿದೆ. ಜಾತ್ರೆ ಪೂರ್ವದಲ್ಲಿ ನಡೆಸುವ ವಿಶಿಷ್ಟ ಹೊರಮಂಗಳವಾರ ಆಚರಣೆಯನ್ನು ಮೂರು ವಾರ ಆಚರಿಸಲು ನಿರ್ಧರಿಸಲಾಗಿದೆ. ಜನವರಿ 31 ಮೊದಲ ಹೊರ ಮಂಗಳವಾರ ಆಚರಣೆ ನಡೆಯಲಿದೆ. ಫೆ.7 ಮತ್ತು ಜ.14ರಂದು ಎರಡು ಮತ್ತು ಮೂರನೇ ಹೊರ ಮಂಗಳವಾರ ಆಚರಿಸಲಾಗುವುದು. ಮಂಗಳವಾರ ಸಂದರ್ಭದಲ್ಲಿ ಅಂಕೆ ಹಾಕಿದ ಕಾಳಮ್ಮ, ದುರ್ಗಮ್ಮದೇವಿಯರ ಪುನರ್ ಪ್ರತಿಷ್ಠಾಪನೆ ಫೆಬ್ರುವರಿ 21 ರಂದು ನಾಲ್ಕನೇ ಮಂಗಳವಾರ ನಡೆಯಲಿದೆ. ಫೆಬ್ರವರಿ 22ರ ಬೆಳಿಗ್ಗೆ ದೇವಿಯರ ವಿವಾಹ ಮಹೋತ್ಸವದ ಮೂಲಕ ಜಾತ್ರೆ ಆರಂಭಗೊಳ್ಳಲಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Related Articles

Back to top button