ಅಂಕೋಲಾದಲ್ಲಿಂದು 2 ಪಾಸಿಟಿವ್ ಕೇಸ್:
ತಳಗದ್ದೆಯಲ್ಲಿ ಮತ್ತೆ ಕಾಣಿಸಿಕೊಂಡ ಸೋಂಕು?
ಅಂಕೋಲಾ : ತಾಲೂಕಿನ ಬೆಳಸೆ ಗ್ರಾಮಪಂಚಾಯತ ವ್ಯಾಪ್ತಿಯ ತಳಗದ್ದೆ ಗ್ರಾಮದಲ್ಲಿ ಶುಕ್ರವಾರ ಮತ್ತೇ
2 ಹೊಸ ಕರೊನಾ ಸೋಂಕಿನ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ತಳಗದ್ದೆ ಗ್ರಾಮವೊಂದರಲ್ಲಿಯೇ ಈವರೆಗೆ 3ಪ್ರಕರಣಗಳು ದಾಖಲಾದಂತಾಗಿದೆ. ಜುಲೈ 18ರಂದು ಸೋಂಕು ಕಾಣಿಸಿಕೊಂಡ 16ರ ಯುವತಿ ಪ್ರಥಮ ಸೋಂಕಿತೆಯಾಗಿ ತಾಲೂಕಾ ಸರಕಾರಿ ಆಸ್ಪತ್ರೆಯ ಕೋವಿಡ್ ಹಾಸ್ಪಿಟಲ್‌ಗೆ ದಾಖಲಾಗಿದ್ದಳು. ಸೋಂಕಿನಿಂದ ಗುಣಮುಖಳಾದ ಯುವತಿ ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಳು.(©Copyright reserved by Vismaya tv)ಇAದು ಸೋಂಕು ಕಾಣಿಸಿಕೊಂಡ ಈರ್ವರಲ್ಲಿ ಓರ್ವಳು 40ರ ಮಹಿಳೆಯಾಗಿದ್ದು, ಇವಳು ಪ್ರಥಮ ಸೋಂಕಿತೆಯ ತಾಯಿ ಎಂದು ತಿಳಿದುಬಂದಿದೆ. ಇನ್ನೊರ್ವ ಸೋಂಕಿತ 44ರ ಪುರುಷ ಪಕ್ಕದ ಮನೆಯವನಾಗಿದ್ದು ಈ ಹಿಂದಿನ ಸೋಂಕಿತೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿರುವ ಸಾಧ್ಯತೆ ಬಲವಾಗಿದೆ. ಒಟ್ಟಾರೆಯಾಗಿ ಮಗಳು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆ ಸೇರುವಂತಾದರೆ;ಮನೆಯಲ್ಲಿದ್ದ ತಾಯಿ ಸೋಂಕಿನ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆ ಸೇರುವಂತಾಯಿತು.
ತಳಗದ್ದೆಯಲ್ಲಿ ಪ್ರಥಮ ಸೋಂಕು ಪತ್ತೆಯಾದ ನಂತರ ಸುಮಾರು 15 ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದ್ದು, ಈಗ ಬಂದ ವರದಿಗಳಲ್ಲಿ 2 ಪಾಸಿಟಿವ್ ಲಕ್ಷಣಗಳು ಕಂಡುಬಂದಿದೆ ಎಂದು ಹೇಳಲಾಗಿದ್ದು ಸಂಜೆಯ ಹೆಲ್ತ್ ಬುಲೆಟಿನಲ್ಲಿ ಈ ಕುರಿತು ದೃಢಗೊಳ್ಳಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)