Important
Trending

ರಸ್ತೆ ಮಧ್ಯೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಲಾರಿ

ಅಂಕೋಲಾ: ಬಳಸಿ ಬಿಸಾಡಿದ ಪ್ಲಾಸ್ಟಿಕ್ ಚೀಲಗಳು ಮತ್ತಿತರ ತ್ಯಾಜ್ಯಗಳನ್ನು ತುಂಬಿಕೊಂಡು ಸಾಗುತ್ತಿದ್ದ ಭಾರೀ ವಾಹನವೊಂದು ಆಕಸ್ಮಿಕ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಘಟನೆ ಅಂಕೋಲಾದಲ್ಲಿ ಸಂಭವಿಸಿದೆ ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ ಯಲ್ಲಾಪುರ ಮಾರ್ಗ ಮಧ್ಯೆ ಆಕಸ್ಮಿಕ ಬೆಂಕಿ ಅವಘಡ ಒಂದು ಸಂಭವಿಸಿದ್ದು, ಭಾರೀ ವಾಹನವೊಂದರ ಮುಂಬದಿ ಟೈಯರ್, ಡ್ರೈವರ್ ಕ್ಯಾಬಿನ್ ಮತ್ತಿತರ ಭಾಗಗಳು ಸುಟ್ಟು ಕರಕಲಾಗಿದೆ.

ಕೊಚ್ಚಿಯಿಂದ ಸ್ಥಳೀಯ ಸಂಸ್ಥೆ (ಮುನ್ಸಿಪಾರ್ಟಿ ) ಒಂದರಲ್ಲಿ ವಿಂಗಡಿಸಿಡಲಾಗಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ತುಂಬಿಕೊಂಡು ಗುಲ್ಬರ್ಗ ಕಡೆ ತೆರಳುತ್ತಿದ್ದ ಲಾರಿ ವಾಹನಕ್ಕೆ ಅಂಕೋಲಾ ತಾಲೂಕಿನ ಕಂಚಿನ ಬೈಲ್ ಬಳಿ ಸಾಗುತ್ತಿದ್ದಾಗ ನಸುಕಿನ ಜಾವ 4.30 ರ ಸುಮಾರಿಗೆ ವಾಹನದ ಬ್ಯಾಟರಿಯ ಶಾರ್ಟ್ ಸರ್ಕ್ಯೂಟ್ ಇಲ್ಲವೇ ಅದಾವುದೋ ಕಾರಣದಿಂದ ಬೆಂಕಿ ಹೊತ್ತಿ ಉರಿಯಲಾರಂಭಿಸಿದೆ ಎನ್ನಲಾಗಿದೆ.

ಸುದ್ದಿ ತಿಳಿದ ಸ್ಥಳೀಯ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,ಸ್ಥಳಕ್ಕೆ ಆಗಮಿಸಿ ಅಗ್ನಿ ಶಮನ ಮಾಡಿದ್ದಾರೆ.ಇದರಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿದಂತಾಗಿದೆ. ಪಿಎಸ್ಐ ಉದ್ದಪ್ಪ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹೆದ್ದಾರಿಯಲ್ಲಿ ಸಾಗುವ ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಲಲಿತಾ ರಜಪೂತ ಮತ್ತು ಉಮೇಶ ಹೆದ್ದಾರಿ ಗಸ್ತು ವಾಹನದ ಮೂಲಕ ಕರ್ತವ್ಯ ನಿರ್ವಹಿಸಿದರು. ಅದೃಷ್ಟವಶತ್ ಲಾರಿ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ. ಬೆಂಕಿ ಅವಘಡದ ಕುರಿತಂತೆ ಪೊಲೀಸರಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button