Focus NewsImportant
Trending

ಅಣ್ಣನ ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಮೂವರು ಆರೋಪಿಗಳು

ಹೊನ್ನಾವರ: ಇಲ್ಲಿನ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಷಯಕ್ಕೆ ನಡೆದ ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ಕೊನೆಗೂನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಕೊಲೆ ಆರೋಪಿಗಳಾದ ವಿನಾಯಕ ನಾಯ್ಕ, ಚಿದಂಬರ ನಾಯ್ಕ ಹಾಗೂ ಮಂಜುನಾಥ ನಾಯ್ಕ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ.

ವೈಯಕ್ತಿಕ ದ್ವೇಷ: ಮಹಿಳೆ ಮೇಲೆ ಹಲ್ಲೆ: 12 ಜನರ ವಿರುದ್ಧ ದೂರು

ನವೆಂಬರ್ 5ರಂದು ಆಸ್ತಿ ವಿಷಯದ ಕುರಿತು ಸಹೋದರರ ನಡುವೆ ನಡೆದ ಕಲಹದಲ್ಲಿ ಹನುಮಂತ ನಾಯ್ಕ ಮೃತಪಟ್ಟಿದ್ದ. ಇನ್ನೊರ್ವ ಮಾರುತಿ ನಾಯ್ಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಗೆ ಸಂಬoಧಿಸಿದ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button