Follow Us On

WhatsApp Group
Important
Trending

ಪ್ರಸಿದ್ಧ ನಾಗಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯದಲ್ಲಿ ನವೆಂಬರ್ 29 ರಂದು ಚಂಪಾಷಷ್ಠಿ

ಹೊನ್ನಾವರ: ನವೆಂಬರ್ 29 ಮಂಗಳವಾರದoದು ನಡೆಯುವ ಚಂಪಾಷಷ್ಠಿ ಹಿನ್ನಲೆಯಲ್ಲಿ ಹೊನ್ನಾವರ ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾಸದ ಸಮೀಪ ಅಂಗಡಿ ಮುಂಗಟ್ಟು ಹರಾಜು ಪ್ರಕ್ರಿಯೆ ಇದೆ ಬರುವ ನವೆಂಬರ್ 20 ರಂದು ಬೆಳಿಗ್ಗೆ 10 ಘಂಟೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಎಸ್ ಆರ್ ಹೆಗಡೆ ಮಾಹಿತಿ ನೀಡಿದ್ದಾರೆ. ಚಂಪಾಷಷ್ಠಿ ಹಿನ್ನಲೆಯಲ್ಲಿ ಹೊನ್ನಾವರ ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾಸದಲ್ಲಿ ಪ್ರತಿವರ್ಷ ಅಂಗಡಿ ಮುಂಗಟ್ಟು ಹರಾಜು ಕಾರ್ಯಕ್ರಮ ಪ್ರತಿವರ್ಷದಂತೆ ನಡೆಯುತ್ತಾ ಬಂದಿದೆ.

ಅಣ್ಣನ ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಮೂವರು ಆರೋಪಿಗಳು

ಈ ಬಾರಿಯ ಚಂಪಾಷಷ್ಠಿ ಇದೆ ಬರುವ ನವೆಂಬರ್ 29 ರಂದು ನಡೆಯಲಿದ್ದು, ಈ ಬಾರಿಯ ಹರಾಜು ಪ್ರಕ್ರಿಯೆ ಇದೆ ಬರುವ ನವೆಂಬರ್ 20 ರಂದು ನಡೆಯಲು ತೀರ್ಮಾನಿಸಲಾಗಿದೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್ ಆರ್ ಹೆಗಡೆ ಮಾತನಾಡಿ, ಅಂಗಡಿ ಇಡುವ ಆಸಕ್ತಿ ಇದ್ದವರು ಹರಾಜಿನಲ್ಲಿ ಪಾಲಗೋಂಡು ನಿಯಮಾವಳಿಗಳಿಗೆ ಅನುಸರಿಸಿ ಸಹಕರಿಸಿ ಎಂದು ವಿನಂತಿಸಿದರು, ಈ ಸಂದರ್ಭದಲ್ಲಿ ಸಮಿತಿಯ ನಾರಾಯಣ ಹೆಗಡೆ, ಎನ್ ಎಮ್ ಭಟ್ಟ ಇದ್ದರು,ಅಂಗಡಿ ಹರಾಜು ಪ್ರಕ್ರಿಯೆ: ಸಂಪರ್ಕಿಸಿ 08387-279572, 9480419572

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button