ಮೀಟರ್ ರೂಂನಲ್ಲಿ ಕರ್ತವ್ಯಕ್ಕೆ ಇದ್ದ ವಾಲ್ ಮೆನ್ ಸಾವು: ಜನಪರ ಹೋರಾಟಗಾರ ಅಕಾಲಿಕ ನಿಧನ

ನೊಂದ ಕುಟುಂಬಕ್ಕೆ ನೀಡಬೇಕಿದೆ ಸೂಕ್ತ ಪರಿಹಾರ

ಅಂಕೋಲಾ: ಕರ್ನಾಟಕ  ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ, ಕಾರವಾರ ಉಪ ವಿಭಾಗ ವ್ಯಾಪ್ತಿಯ ಅಂಕೋಲಾ ತಾಲೂಕಿನ ಬಾಳೆಗುಳಿ ಮೀಟರ್ ರೂಂ ನಲ್ಲಿ ಹೊರಗುತ್ತಿಗೆ ನೌಕರನಾಗಿ ಕಳೆದ12 ವರ್ಷಗಳಿಂದ ವಾಲ್ ಮೆನ್  ಆಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಅಕಾಲಿಕ ಮರಣಕ್ಕೀಡಾದ ಘಟನೆ ನಡೆದಿದೆ.

ಅತಿಕ್ರಮಣ ತೆರವು ಮಾಡಿ ಎಂದು ಹೇಳಿದ್ದಕ್ಕೆ ಆಕ್ರೋಶ: ಬೀಟ್ ಗೆ ತೆರಳಿದ್ದ ಅರಣ್ಯಾಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ

ಕೃಷ್ಣಾಪುರ ನಿವಾಸಿ ರಾಜೇಶ್ ಇಕ್ಕು ನಾಯ್ಕ್ ಮೃತ ದುರ್ದೈವಿಯಾಗಿದ್ದಾನೆ. ಈತನು ನವೆಂಬರ್ 14ರ ರಾತ್ರಿ ರಾ.ಹೆ 66 ರ  ಬಾಳೆಗುಳಿ ಬೈಪಾಸ್ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನೀರು ಸರಬರಾಜು ಮಂಡಳಿಯ ಮೀಟರ್ ರೂಂ ನಲ್ಲಿ ಕೆಲಸಕ್ಕೆ ತೆರಳಿದ್ದವನು,ರಾತ್ರಿ ವೇಳೆ ತನ್ನ ಸಹೋದ್ಯೋಗಿಯೊಂದಿಗೆ ಅಲ್ಲಿಯೇ ಮಲಗಿದ್ದವನು,ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ,ಕಡಿಮೆ ರಕ್ತದೊತ್ತಡ, ಇಲ್ಲವೇ ಆರೋಗ್ಯದ ಏರುಪೇರಿನ ಇತರೆ ಸಮಸ್ಯೆ ಅಥವಾ ಇನ್ನಾವುದೋ ಕಾರಣದಿಂದ ಉಸಿರು ಕಳೆದುಕೊಂಡಿದ್ದ ಎನ್ನಲಾಗಿದೆ.ವಿಷಯ ತಿಳಿದು ಕುಟುಂಬಸ್ಥರು ಬಂದು ಆತಂಕದಿಂದ ನೋಡುವಷ್ಟರಲ್ಲಿ,ಇಲ್ಲವೇ ಆನಂತರ ಉಪಚಾರಕ್ಕೆ ಕರೆದೊಯ್ಯುವಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗಿರುವುದು ದೃಢಪಟ್ಟು ದುಃಖ ಸಾಗರದಲ್ಲಿ ಮುಳುಗೇಳುವಂತಾಯಿತು ಎನ್ನಲಾಗಿದೆ.

ತನ್ನ ಜನಪರ ಹೋರಾಟ ಹಾಗೂ ನೇರ ಮಾತುಗಾರಿಕೆಯಿಂದ ಹಲವರ ಮನ ಗೆದ್ದಿದ್ದ ಈತ, ರಾಜಕೀಯ ಪಕ್ಷವೊಂದರ ಸ್ಥಳೀಯ ಬೂತ್ ಮಟ್ಟದ ಪ್ರಮುಖನಾಗಿಯೂ ಗುರುತಿಸಿಕೊಂಡಿದ್ದ ಈತ ಗ್ರಾಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲ್ ಜೀವನ್ ಮಿಷನ್ ಮತ್ತಿತರ ಸಾರ್ವಜನಿಕ ಸಭೆಗಳಲ್ಲಿ ಗಟ್ಟಿ ಧ್ವನಿಯಿಂದ ಮಾತನಾಡಿ ನಾಗರಿಕ ಸೌಲಭ್ಯಕ್ಕೆ ಒತ್ತಾಯಿಸುತ್ತಿದ್ದ.ಬದುಕಿನಲ್ಲಿ ಪರ ವಿರೋಧ ಸಹಜ ಎಂಬಂತೆ ತನ್ನನ್ನು ವಿರೋಧಿಸುವವರ ಮಧ್ಯೆಯೂ ಸೆಟೆದು ನಿಲ್ಲಬೇಕು ಎನ್ನುವ ಆತ್ಮಸ್ಥೈರ್ಯ ಹೊಂದಿದ್ದ ಎನ್ನುತ್ತಾರೆ ಆತನನ್ನು ಬಲ್ಲವರು.ಆದರೆ ಗಟ್ಟಿ ಮನಸ್ಸಿನ ಆತ ಈ ರೀತಿ ಅಚಾನಕ್ಕಾಗಿ ಸಾವಿಗೆಡಾಗಿದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ  ಇನ್ನು ಕೆಲವು ಗೆಳೆಯರು. ಆಗಾಗ ಕಾಡುತ್ತಿತ್ತು ಎನ್ನಲಾದ ಕಡಿಮೆ ರಕ್ತದೊತ್ತಡ, ಅಥವಾ ಇನ್ನಿತರ ಆಕಸ್ಮಿಕ ಆರೋಗ್ಯ ಏರುಪೇರಿನಿಂದ ಆತನ ಪ್ರಾಣ ಪಕ್ಷಿ ಹಾರಿ ಹೋಗಿರಬಹುರಾಗಿದ್ದು, ಸಾವಿಗೆ ಕಾರಣಗಳೇನೇ ಇದ್ದರು ಕುಟುಂಬಸ್ಥರಲ್ಲಿ ಮತ್ತು ಊರವರಲ್ಲಿ ದುಃಖದ ಛಾಯೆ ಆವರಿಸಿದೆ.

ಪೋಲಿಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎನ್ನಲಾಗಿದ್ದು,ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.ಈತನ ಅಕಾಲಿಕ ಸಾವಿನ ಸುದ್ದಿ ಕೇಳಿ ,ಗೆಳೆಯರು,ಕುಟುಂಬ ಸಂಬಂಧಿಗಳು,ಆಪ್ತರು ಹಾಗೂ ಊರ ನಾಗರಿಕರು ನೂರಾರು ಸಂಖ್ಯೆಯಲ್ಲಿ ಮೃತನ ಮನೆ ಕೃಷ್ಲಾ ಪುರಕ್ಕೆ ಆಗಮಿಸಿ ಕಂಬನಿ ಮಿಡಿದರು.

ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಘಟನಾಸ್ಥಳಕ್ಕೆ ಮತ್ತು ಮೃತ ಸಿಬ್ಬಂದಿಯ ಮನೆಗೆ ಭೇಟಿ ನೀಡಿದ್ದರು ಎನ್ನಲಾಗಿದ್ದು, ಅವರು ಅಷ್ಟಕ್ಕೆ ಕೈ ತೊಳೆದುಕೊಳ್ಳದೆ, ಮಾನವೀಯ ನೆಲೆಯಲ್ಲಿ ಸಂಬಂಧಿತ ಅಧಿಕಾರಿಗಳು, ಕರ್ತವ್ಯ ನಿರತ ಹೊರಗುತ್ತಿಗೆ ನೌಕರನ ಅಕಾಲಿಕ ಸಾವಿನಿಂದ  ನೊಂದ ಪತ್ನಿ ಮತ್ತು ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ಸಾಂತ್ವನ ಹೇಳುವ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ. ಜನಪ್ರತಿನಿಧಿಗಳು,ಪಕ್ಷದ ಪ್ರಮುಖರು ಸಹ  ನೊಂದ ಕುಟುಂಬಕ್ಕೆ ನೆರವಿನ ಹಸ್ತ ಚಾಚ ಬೇಕೆನ್ನುವ ಮಾತು ತಳಮಟ್ಟದ ಕೆಲ ಕಾರ್ಯಕರ್ತರಿಂದ ಕೇಳಿ ಬಂದಂತಿದೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version