ಅತಿಕ್ರಮಣ ತೆರವು ಮಾಡಿ ಎಂದು ಹೇಳಿದ್ದಕ್ಕೆ ಆಕ್ರೋಶ: ಬೀಟ್ ಗೆ ತೆರಳಿದ್ದ ಅರಣ್ಯಾಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ದಾಪುರ : ಬೀಟ್ ಗೆ ತೆರಳಿದ್ದ ಅರಣ್ಯ ಉಪವಲಯ ಅಧಿಕಾರಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಗೆ ಯತ್ನಿಸಿದ ಘಟನೆ ತಾಲೂಕಿನ ಕಾನಸೂರಿನಲ್ಲಿ ನಡೆದಿದೆ. ತಾಲೂಕಿನ ಕಾನಸೂರು ಉಪ ವಲಯ ಅರಣ್ಯಾಧಿಕಾರಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದ್ದು, ಗಾಯಾಳು ಅಧಿಕಾರಿಯನ್ನು ವಿಶ್ವನಾಥ ತಿಮ್ಮ ನಾಯ್ಕ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂದೆಯ ಅಂತ್ಯ ಸಂಸ್ಕಾರ ನಡೆದ ಕೆಲ ಹೊತ್ತಿನಲ್ಲೇ ಮಸಣದ ಹಾದಿ ತುಳಿದ ಮಗ: ವಿಧಿಯ ಕ್ರೂರ ಆಟಕ್ಕೆ ನಲುಗಿದ ಬಡಕುಟುಂಬ

ಹಲ್ಲೆ ಮಾಡಿದ ಆರೋಪಿ ಬೀಳಗೊಡ್ ಬಾಳೆಕೈ ಗ್ರಾಮದ ಮಹಾಬಲೇಶ್ವರ ಚಂದು ಮರಾಠಿಯನ್ನು ಪೊಲೀಸರು ಬಂಧಿಸಿದ್ದಾರೆ, ತಾಲೂಕಿನ ಕಾನಸೂರು ಸಮೀಪದ ಬಿಳಗೋಡ ನಲ್ಲಿ ಈ ಘಟನೆ ನಡೆದಿದ್ದು, ಬೀಟ್ ಗೆ ಎಂದು ಹೋದ ವೇಳೆ ಕತ್ತಿಯಿಂದ ಹೊಡೆದು ಹಲ್ಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ಅರಣ್ಯ ರಕ್ಷಕ ವಿ.ಟಿ.ನಾಯ್ಕ ಅವರು ಈ ಹಿಂದೆ ಶಿರಸಿ ಉಪವಿಭಾಗದಲ್ಲಿ ಹಲವಾರು ಕಡೆ ಒಳ್ಳೆಯ ಕೆಲಸ ಮಾಡಿ ಹೆಸರು ಮಾಡಿದ್ದರು. ಆರೋಪಿ ಮನೆಯನ್ನು ಅತಿಕ್ರಮಣಮಾಡಿಕೊಂಡಿದ್ದು, ಅಧಿಕಾರಿ ಇದನ್ನು ಖುಲ್ಲಾ ಪಡಿಸಬೇಕೆಂದು ಹೇಳಿದ್ದು, ಇದರಿಂದ ಆಕ್ರೋಶಗೊಂಡ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version