ತಂದೆಯ ಅಂತ್ಯ ಸಂಸ್ಕಾರ ನಡೆದ ಕೆಲ ಹೊತ್ತಿನಲ್ಲೇ ಮಸಣದ ಹಾದಿ ತುಳಿದ ಮಗ: ವಿಧಿಯ ಕ್ರೂರ ಆಟಕ್ಕೆ ನಲುಗಿದ ಬಡಕುಟುಂಬ

ಅಂಕೋಲಾ : ತಂದೆ ನಿಧನರಾಗಿ, ಅವರ ಅಂತ್ಯ ಸಂಸ್ಕಾರ ನಡೆಸಿದ ಕೆಲವೇ ಘಂಟೆಗಳಲ್ಲಿ , ಮಗನೂ ಮಸಣ ಸೇರುವಂತಾದ ಮನಕಲುಕುವ ಘಟನೆ ತಾಲೂಕಿನ ಬೇಳಾ ಬಂದರಿನಲ್ಲಿ ಬುಧವಾರ ನಡೆದಿದೆ. ಬೇಳಾ ಬಂದರ ನಿವಾಸಿ ವೆಂಕಟೇಶ ಥಾಕು ಬಂಟ  ವಯೋಸಹಜ ಕಾಯಿಲೆಯಿಂದ ಬುಧವಾರ ತೀರಿಕೊಂಡಿದ್ದರು. ಅವರ ಅಂತ್ಯಕ್ರಿಯೆ ನಡೆಸಿದ ಕೆಲವೇ ಗಂಟೆಯಲ್ಲಿ (ಮೃತರ ) ಮಗ ಮಂಜುನಾಥ ವೆಂಕಟೇಶ ಬಂಟ(33) ಈತನೂ ಸಹ ಮರಣ ಹೊಂದುವ ಮೂಲಕ ತಂದೆಯ ಬೆನ್ನಿಗೆ  ಇಹಲೋಕ ತ್ಯಜಿಸಿದಂತಾಗಿದೆ.

Recruitment 2022: SSLC ಪಾಸಾದವರಿಗೆ ಉದ್ಯೋಗಾವಕಾಶ: 21 ರಿಂದ 69 ಸಾವಿರ ಆರಂಭಿಕ ವೇತನ

ಬಡ ಕುಟುಂಬದ ನೋವಿನ ಕಥೆ ಎಂಥವರ ಕರುಳನ್ನು ಚುರ್ ಎನ್ನುವಂತೆ ಮಾಡದಿರದು.ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ತನ್ನ ಮಗ ಮಂಜುನಾಥನನ ಡಯಾಲಿಸಿಸ್ ಮತ್ತಿತರ ಚಿಕಿತ್ಸೆ ಹಾಗೂ ಉಪಚಾರಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತ ತನ್ನ ವೃದ್ಧಾಪ್ಯ ಹಾಗೂ ಅನಾರೋಗ್ಯವನ್ನು ಲೆಕ್ಕಿಸದ ತಂದೆ, ಕೊನೆಗೂ ಕಾಲನ ಕರೆಗೆ ಓಗೊಟ್ಟು ದೈವಪಾದ ಸೇರಿದರೆ,ತಂದೆಯ ಪ್ರೀತಿ ಹಾಗೂ ಸೇವೆಯಿಂದಲೇ ಇಷ್ಟು ದಿನ ಜೀವಂತವಾಗಿದ್ದೇನೋ ಏನೋ   ಎಂಬಂತೆ ಇದ್ದ ಮಗ, ತಂದೆ ವೆಂಕಟೇಶನ ಸಾವಿನ ನೋವು ಅರಗಿಸಿಕೊಳ್ಳಲಾಗದೆ ಕೊನೆಗೂ ತಂದೆಯ ಜೊತೆ ಮಸಣದ ಹಾದಿ ತುಳಿಯುವಂತಾಗಿ, ವಿಧಿಯಾಟಕ್ಕೆ  ಕುಟುಂಬ ಕಣ್ಣೀರಿಡುವಂತಾಗಿದೆ.

ಮನೆಯ ಯಜಮಾನನನ್ನು ಕಳೆದುಕೊಂಡ ದುಃಖದಲ್ಲಿದ್ದ ಪತ್ನಿಗೆ , ಮಗನೂ ಇನ್ನಿಲ್ಲದಂತಾಗಿರುವುದು ಮತ್ತು ಮಗಳ ಜೊತೆ ಸಂಸಾರದ ನೊಗ ಹೊರಬೇಕಾಗಿ ಬಂದಿರುವುದು ದುರ್ವಿಧಿಯೇ ಸರಿ. ನೊಂದ ಬಡ ಕುಟುಂಬಕ್ಕೆ ಕೇವಲ ಸಾಂತ್ವನ ಹೇಳಿದರೆ ಅಷ್ಟೇ ಸಾಲದೇ ಮಾನವೀಯ ನೆಲೆಯಲ್ಲಿ,ಸಂಘ-ಸಂಸ್ಥೆಗಳು ಜನಪ್ರತಿನಿಧಿಗಳು,ಇತರರು ನೆರವಿನ ಹಸ್ತ ಚಾಚ ಬೇಕಿದೆ. ಒಂದೇ ದಿನ ತಂದೆ ಮತ್ತು ಮಗ ಮರಣ ಹೊಂದುವ ಮೂಲಕ ಗ್ರಾಮಸ್ಥರಲ್ಲಿ ಶೋಕದ ಛಾಯೆ ಆವರಿಸಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version