ಈ ರೀತಿಯ ಸುಳ್ಳುಸಂದೇಶ ನಂಬಬೇಡಿ: ಅಸಲಿಯತ್ತು ಪರೀಕ್ಷಿಸಿ!

ನಿಮ್ಮ ಮೊಬೈಲ್‌ಗೂ ಬರಬಹುದು ಇಂಥ ಮೆಸೇಜ್

ಹೊನ್ನಾವರ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಗ್ರಾಹಕರ ಮೊಬೈಲ್‌ಗಳಿಗೆ ಬಾಕಿ ವಿದ್ಯುತ್ ಬಿಲ್ ತುಂಬದೆ ಉಳಿದರೆ ಅಂತಹ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುವುದಾಗಿ ಸಂದೇಶಗಳು ಬರುತ್ತಿವೆ. ಆದರೆ, ಇವು ಸುಳ್ಳು ಸಂದೇಶಗಳಾಗಿದ್ದು, ಇವುಗಳನ್ನು ಗ್ರಾಹಕರು ಪರಿಗಣಿಸಬಾರದು. ಒಂದುವೇಳೆ ಗ್ರಾಹಕರಿಗೆ ಈ ಬಗ್ಗೆ ಸಂದೇಹವಿದ್ದಲ್ಲಿ ನೇರವಾಗಿ ಹೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಬಸ್ ಹತ್ತುವ ವೇಳೆ ಪ್ರಯಾಣಿಕನ ಕಿಸೆ ಕತ್ತರಿಸಿ ಹಣ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಕಿಸೆಗಳ್ಳ

ಗ್ರಾಹಕರಿಗೆ ನೀಡಿದ ಬಿಲ್ಲನ್ನು 15 ದಿನಗಳ ಒಳಗಾಗಿ ಪ್ರಭಾತನಗರದ ಹೆಸ್ಕಾಂ ಕಛೇರಿಯ ಕೌಂಟರ್‌ನಲ್ಲಿ, ಭಟ್ಕಳ ಸರ್ಕಲ್‌ನಲ್ಲಿರುವ ಎಟಿಪಿ ಕೌಂಟರ್‌ನಲ್ಲಿ ಅಥವಾ ಮೊಬೈಲ್ ಆ್ಯಪ್, ಆನ್ಲೈನ್ ನೆಟ್ ಬ್ಯಾಂಕಿoಗ್ ಮೂಲಕವು ತುಂಬಬಹುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ರೀತಿಯ ಮೆಸೇಜ್ ಕಳುಹಿಸಿ, ಲಿಂಕ್ ಕ್ಲಿಕ್ ಮಾಡುವಂತೆ ಹೇಳಿ ಬ್ಯಾಂಕ್ ಖಾತೆಯಿಂದ ಹಣಕ್ಕೆ ಕನ್ನಹಾಕುವ ಪ್ರಕರಣಗಳು ಇತ್ತಿಚೆಗೆ ಹೆಚ್ಚುತ್ತಿವೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version