ದಾಂಡೇಲಿ: ಆಲೂರಿನ ಕೃಷಿ ಕ್ಷೇತ್ರದ ಸಾಧಕ ಎಚ್.ಬಿ.ಪರಶುರಾಮ ಅವರ ಕೃಷಿ ಜಮೀನಿನಲ್ಲಿ ಜೇನು ಕೃಷಿ ತರಬೇತಿ ಕಾರ್ಯಕ್ರಮ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಕೃಷಿ ಇಲಾಖೆ ಹಳಿಯಾಳ, ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ ಸಂಸ್ಥೆ, ಶ್ರೀಕ್ಷೇತ್ರ ಧ.ಗ್ರಾ ಯೋಜನೆ ಸಂಯುಕ್ತಾಶ್ರಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಶಿರಸಿಯ ಡಾ.ಮಧುಕೇಶ್ವರ ಹೆಗಡೆ ಅವರು ಪಾಲ್ಗೊಂಡು, ಜೇನು ಕೃಷಿ ಯಾಕೆ, ಹೇಗೆ ಮತ್ತು ಅದರಿಂದಾಗುವ ಲಾಭಗಳನ್ನು ವಿವರಿಸಿದರು.
ಆಂಬ್ಯುಲೆನ್ಸ್ ನ ವೆಂಟಿಲೇಟರ್ ಮಶಿನ್ ಹಾಗೂ ಸ್ಟೆಪ್ನಿ ಟಯರ್‌ಗಳನ್ನ ಕದ್ದ ಕಳ್ಳ ಅರೆಸ್ಟ್
ರೈತರು ತಮ್ಮ ಕೃಷಿ ಚಟುವಟಿಕೆಯ ಜೊತೆ ಜೊತೆಯಲ್ಲಿ ಜೇನು ಕೃಷಿಯನ್ನು ಮಾಡುವುದರ ಮೂಲಕ ತಮ್ಮ ಆರ್ಥಿಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಜಗತ್ತಿನಾದ್ಯಂತ ಜೇನಿಗೆ ಬೇಡಿಕೆಯಿದೆ. ನಾವು ಜೇನಿನ ಮಹತ್ವದ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಬೇಕೆoದರು ಎಂದರು.
ವಿಸ್ಮಯ ನ್ಯೂಸ್, ಯಲ್ಲಾಪುರ