Big NewsImportant
Trending

ಗದ್ದೆಗೆ ನೀರು ಹಾಯಿಸಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು: ನೋವಲ್ಲೂ ಸಾರ್ಥಕತೆ ಮರೆದ ಕುಟುಂಬಸ್ಥರು

ಮುoಡಗೋಡ: ವಿದ್ಯುತ್ ಸ್ಪರ್ಶಿಸಿ ಯುವನೊರ್ವ ಮೃತಪಟ್ಟ ಘಟನೆ ತಾಲೂಕಿನ ಹುನಗುಂದ ಗ್ರಾಮದ ನಡೆದಿದ್ದು, ಸಾವಿನಲ್ಲೂ ನೇತ್ರದಾನ ಮಾಡಿ ಮೃತನ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಜಿನೇಂದ್ರ ಬಸ್ತವಾಡ್ (18) ಮೃತ ಯುವಕ. ಗದ್ದೆಗೆ ನೀರು ಹಾಯಿಸಲು ಹೋಗಿದ್ದ ವೇಳೆ ಯುವಕ ವಿದ್ಯುತ್ ಸ್ಪರ್ಶಿಸಿದ್ದರಿಂದ ಮೃತಪಟ್ಟಿದ್ದಾನೆ. ಯುವಕ ಸಾವನ್ನಪ್ಪಿದ ನಂತರ ಆತನ ನೇತ್ರದಾನ ಮಾಡಲು ಕುಟುಂಬಸ್ಥರು ಶಿರಸಿಯ ಲಯನ್ಸ್ ನಯನ ನೇತ್ರ ಭಂಡಾರಕ್ಕೆ ಸಂಪರ್ಕಿಸಿದ್ದರು.

ಶ್ರೀ ಕ್ಷೇತ್ರ ಧಾರೇಶ್ವರದಲ್ಲಿ ಕಾರ್ತಿಕ ದೀಪೋತ್ಸವ: ರಥಬೀದಿಯವರೆಗೂ ಬೆಳಗಿತು ಸಹಸ್ರಾರು ದೀಪ

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ನೇತ್ರ ತಂಡದವರು ಯುವಕನ ನೇತ್ರಗಳನ್ನು ಸುತಕ್ಷಿತವಾಗಿ ಪಡೆದುಕೊಂಡು ಹೋಗಿದ್ದಾರೆ. ಬಾಲಕನಿಂದ ಮತ್ತೆರಡು ಅಂಧರಿಗೆ ಬೆಳಕು ತುಂಬಿದoತಾಗಿದೆ. ಹೀಗಾಗಿ, ಮೃತ ಯುವಕನ ಕುಟುಂಬದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಯುವಕನಿಂದ ಸಾರ್ಥಕತೆ ಮೆರೆದಂತಾಗಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Related Articles

Back to top button