Join Our

WhatsApp Group
Focus NewsImportant
Trending

ಊಟ ಮಾಡಿ ಮಲಗಿದ್ದವನು ನಾಪತ್ತೆ: ರೈಲ್ವೆ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿದ್ದೇನೆ ಎಂದು ಮಗನಿಗೆ ಕರೆ ಮಾಡಿದ ತಂದೆ  ಹೋದದ್ದೆಲ್ಲಿಗೆ ?

ಕುತ್ತಿಗೆಯಲ್ಲಿ ರುದ್ರಾಕ್ಷಿ, ಕೈಗೆ ಕೇಸರಿ ದಾರ ಧರಿಸಿದ್ದ ವ್ಯಕ್ತಿ ಕಾಣೆ

ಅಂಕೋಲಾ: ವ್ಯಕ್ತಿಯೋರ್ವರು ಮನೆಯಲ್ಲಿ ಯಾರಿಗೂ ತಿಳಸದೇ ಹೊರಗೆ ಹೋದವರು ಮನೆಗೆ ಮರಳಿ ಬರದೇ ಕಾಣೆಯಾಗಿರುವುದಾಗಿ ತಿಳಿದು ಬಂದಿದೆ.  ತಾಲೂಕಿನ ವಂದಿಗೆ ಹನುಮಟ್ಟ ನಿವಾಸಿ ಲಾರಿ ವುಡ್ ಕೆಲಸ ಮಾಡುತ್ತಿದ್ದ ಶಿವಾನಂದ ಗುತ್ತಿ ನಾಯ್ಕ(58) ಕಾಣೆಯಾದ ವ್ಯಕ್ತಿ ಯಾಗಿದ್ದು ನವೆಂಬರ್ 17 ರಂದು ರಾತ್ರಿ ಊಟ ಮಾಡಿ ಮಲಗಿದ್ದವರು ಯಾರಿಗೂ ಹೇಳದೆ ಮನೆಯಿಂದ ಹೊರಗೆ ಹೋಗಿದ್ದು ,ಮರುದಿನ ಬೆಳಿಗ್ಗೆ ಅಂಕೋಲಾ ರೈಲ್ವೆ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿರುವುದಾಗಿ ಮಗನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

40 ಸಾವಿರ ಕಿಲೋಮೀಟರ್ ಪಾದಯಾತ್ರೆ; ಉತ್ತಮ ಸಮಾಜ ಮತ್ತು ಪರಿಸರ ಜಾಗೃತಿ ಸಂದೇಶ ಹೊತ್ತು ಸಾಗುತ್ತಿರುವ ಸರಳ ಜೀವಿ

ಕಾಣೆಯಾದ ವ್ಯಕ್ತಿಯನ್ನು ಹುಡುಕುವ ಪ್ರಯತ್ನ ಮಾಡಿದರೂ ಪತ್ತೆಯಾಗದ ಕಾರಣ ಅವರ ಪತ್ನಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿ ತಮ್ಮ ಕಾಣೆಯಾದ ತಮ್ಮ ಗಂಡನನ್ನು ಹುಡುಕಿ ಕೊಡುವಂತೆ ಕೋರಿದ್ದಾರೆ.  ಕಾಣೆಯಾದ ವ್ಯಕ್ತಿ ಸಾದಾ ಕಪ್ಪು ಮೈಬಣ್ಣ ಸದೃಡ ಮೈಕಟ್ಪು ಹೊಂದಿದ್ದು ಕನ್ನಡ, ಹಿಂದಿ,ಕೊಂಕಣಿ ಭಾಷೆ ಬಲ್ಲವರಾಗಿದ್ದಾರೆ. ಬಿಳಿ ಬಣ್ಣದ ಟೀ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಕುತ್ತಿಗೆಯಲ್ಲಿ ಕೇಸರಿ ದಾರಕ್ಕೆ ರುದ್ರಾಕ್ಷಿ ಮತ್ತು ಕೈಗೆ ಕೇಸರಿ ದಾರ ಕಟ್ಟಿರುತ್ತಾರೆ.

ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಲ್ಲಿ ಅಂಕೋಲಾ ಪೊಲೀಸ್ ಠಾಣೆ 0838822033 ಸಂಖ್ಯೆಗೆ ಅಥವಾ 9480805250 ಮೊಬೈಲ್ ಸಂಖ್ಯೆಗೆ, ಇಲ್ಲವೇ ತಮ್ಮ ಹತ್ತಿರದ ಪೋಲೀಸ್ ಠಾಣೆಗೆ  ಮಾಹಿತಿ ನೀಡುವಂತೆ ಅಂಕೋಲಾ ಪೊಲೀಸರು ಪ್ರಕಟನೆಣೆಯಲ್ಲಿ ತಿಳಿಸಿದ್ದಾರೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button