Follow Us On

WhatsApp Group
Focus NewsImportant
Trending

ಸಾಗವಾನಿ ಮರ ಕಡಿದು ಸಾಗಾಟ: ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಹೊನ್ನಾವರ : ಭಟ್ಕಳ ಅರಣ್ಯ ಉಪವಿಭಾಗದ ಮಂಕಿ ವಲಯ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಕುಚ್ಚೋಡಿ ಅರಣ್ಯ ಪ್ರದೇಶದಲ್ಲಿ ಎರಡು ಸಾಗವಾನಿ ಮರಗಳನ್ನು ಕಡಿದು ವಾಹನದಲ್ಲಿ ಸಾಗಾಟ ಪಡಿಸಿರುವ ಆರೋಪದಲ್ಲಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಮಂಕಿ ಖಾಜಿಮನೆಯ ಕಮಲಾಕರ ಗಣಪತಿ ನಾಯ್ಕ ಎಂಬಾತನನ್ನು ಬಂಧಿಸಲಾಗಿದೆ.ಈ ಹಿಂದೆ ವಾಹನವನ್ನು ಜಪ್ತಿ ಮಾಡಿ ಆರೋಪಿಗಳಾದ ವಿಘ್ನರಾಜ ಮಂಕಿ, ಬಂಡಿಬೈಲ್‌ನ ಗಣಪತಿ ನಾಯ್ಕ, ಕೆಳಗಿನ ಇಡಗುಂಜಿ ಗಂಗಾಧರ ತಿಮ್ಮಪ್ಪ ಆಚಾರಿ ಇವರನ್ನು ಬಂಧಿಸಲಾಗಿತ್ತು.

Railway Recruitment 2022: ರೈಲ್ವೆ ನೇಮಕಾತಿ: SSLC, PUC, ITI ಪಾಸ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಕಮಲಾಕರ ನಾಯ್ಕ ತಲೆಮರೆಸಿಕೊಂಡಿದ್ದ. ಈತ ಮಹಾರಾಷ್ಟ್ರ ದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆ ದಾಳಿ ನಡೆಸಲಾಗಿದ್ದು, ಮಹಾರಾಷ್ಟ್ರ ದ ಸಿಂಧುದುರ್ಗ ಜಿಲ್ಲೆಯ ಮಾಲ್ವನ್ ತಾಲೂಕಿನಲ್ಲಿ ಬಂಧಿಸಲಾಗಿದೆ.

ವಿಸ್ಮಯ ನ್ಯೂಸ್,ಹೊನ್ನಾವರ

Back to top button