Important
Trending

ತೆಂಗಿನಮರದಿoದ ಕಾಯಿ ಕೊಯ್ಯುವ ವೇಳೆ ಅವಾಂತರ: ಕೆಳಗೆ ಬಿದ್ದು ಇಬ್ಬರ ಸಾವು

ಕಾರವಾರ: ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಹೊನ್ನಾವರ ಸಂಶಿಯ ಶಂಕರ ನಾಯ್ಕ (58) ಎನ್ನುವವರು ನಾಮಧಾರಿಕೇರಿಯಲ್ಲಿ ಓರ್ವರ ತೋಟದಲ್ಲಿ ತೆಂಗಿನ ಮರ ಏರಿ ಕಾಯಿಕೊಯ್ಯುವ ವೇಳೆ ಕೆಳಗೆ ಇಳಿಯುತ್ತಿದ್ದಾಗ ಜಾರಿ ಬಿದ್ದಿದ್ದು, ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾದ ಮೃತಪಟ್ಟಿದ್ದಾರೆ.

Railway Recruitment 2022: ರೈಲ್ವೆ ನೇಮಕಾತಿ: SSLC, PUC, ITI ಪಾಸ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಇನ್ನೊಂದೆಡೆ, ಯಲ್ಲಾಪುರದ ದೇಹಳ್ಳಿಯ ಗಣೇಶ ದೇವಳಿ (52) ಎನ್ನುವವರು ಬಿಸಗೋಡದಲ್ಲಿ ಓರ್ವರ ತೋಟದಲ್ಲಿ ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಗಳಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button