- ಜಿಲ್ಲಾಧಿಕಾರಿಯಿಂದ ಕ್ರಿಮ್ಸ್ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ
- ಕಾರವಾರದ ತಮ್ಮ ತಂಡವನ್ನು ಅಭಿನಂದಿಸಿದ ಡಾ. ಗಜಾನನ ನಾಯಕ
ಕಾರವಾರ : ನಾಗರಪಂಚಮಿಯ ಶುಭದಿನದಂದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ಮತ್ತು ಸಿಬ್ಬಂದಿಗಳು ಮಹಿಳೆಯೋರ್ವಳ ಉದರ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದಂತಾಗಿದೆ.©Copyright reserved by Vismaya tv ಜುಲೈ 22ರಂದು ಕಾರವಾರದ ಕ್ರಿಮ್ಸನಲ್ಲಿ ದಾಖಲಾಗಿದ್ದ ಕೋವಿಡ್-19 ಸೋಂಕಿತ ತುಂಬು ಗರ್ಭೀಣಿಯೋರ್ವಳಿಗೆ, ತದ ನಂತರ ಅವಳಲ್ಲಿ ಪ್ರಸವವೇದನೆ ಕಾಣಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿತ್ತು. ಶನಿವಾರ ಸಿಜೆರಿಯನ್ ಹೆರಿಗೆಗೊಳಪಟ್ಟ ಆ ಮಹಿಳೆಗೆ ಮಧ್ಯಾಹ್ನ 12.15 ಗಂಟೆ ಸುಮಾರಿಗೆ ಮುದ್ದಾದ ಮಗುವೊಂದಕ್ಕೆ ಜನ್ಮನೀಡಿದ್ದು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿಯಿದೆ.
ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಕುಡ್ತರಕರ ಇವರ ನೇತ್ರತ್ವದಲ್ಲಿ ಡಾ. ನರೇಶ ಪಾವಸ್ಕರ, ಡಾ. ಪೂಜಾ, ಡಾ. ಮಂಜುನಾಥ ಭಟ್ಟ್, ಡಾ. ಅರ್ಚನಾ ಪಿಕಳೆ, ಡಾ. ವಿಶ್ವನಾಥ, ಡಾ. ವಜ್ರಮಟ್ಟಿ ಹಾಗೂ ಸಿಬ್ಬಂದಿಗಳಾದ ಜಯಶ್ರೀ ನಾಯ್ಕ, ಸುಷ್ಮಾ ನಾಯ್ಕ, ಕನ್ಸೆಪ್ಪಾ ಆಲ್ಮೇಡಾ, ಮೇಘಾ ನಾಯ್ಕ, ಸಚಿನ ಮತ್ತಿತ್ತರರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದು, ಕ್ರಿಮ್ಸ್‍ನ ಕಾರ್ಯವನ್ನು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಶ್ಲಾಘಿಸಿದ್ದಾರೆ. ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ ತಮ್ಮ ತಂಡದ ಎಲ್ಲರ ಸೇವಾಕಾರ್ಯವನ್ನು ಮೆಚ್ಚಿ ಅಭಿನಂದಿಸಿದ್ದಾರೆ. ©Copyright reserved by Vismaya tv
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
[sliders_pack id=”1487″]ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)