India Post Recruitment 2022: ಅಂಚೆ ಇಲಾಖೆಯಲ್ಲಿ ಹೊಸ ನೇಮಕಾತಿ: ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಭಾರತೀಯ ಅಂಚೆ ಇಲಾಖೆಯಲ್ಲಿ ಹೊಸದಾಗಿ ನೇಮಕಾಗಿ ಆರಂಭವಾಗಿದ್ದು, ಉದ್ಯೋಗ ಹುಡುಕುತ್ತಿರುವವರಿಗೆ ಒಂದು ಶುಭಸುದ್ದಿ. ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಗರಿಷ್ಠ 65 ವರ್ಷ ಮೀರಿರದ ಆಸಕ್ತ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 12, 2022 ಅರ್ಜಿ ಹಾಕಲು ಕೊನೆಯ ದಿನವಾಗಿದೆ.

ಹಿಂಬದಿಯಿoದ ಬರುತ್ತಿದ್ದ ಟೆಂಪೋ ಡಿಕ್ಕಿ: ಸಿನಿಮಿಯ ರೀತಿಯಲ್ಲಿ ಬೈಕ್ ಸಮೇತ ಹಾರಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬಡಿದು ಫೋಟೋಗ್ರಾಫರ್ ಸಾವು

ಅಸಿಸ್ಟೆಂಟ್ ಡೈರೆಕ್ಟರ್, ಡೆಸ್ಕ್ ಆಫೀಸರ್-1, ಅಸಿಸ್ಟೆಂಟ್ ಡೈರೆಕ್ಟರ್-1, ಸೀನಿಯರ್ ಟ್ರಾನ್ಸ್?ಲೇಶನ್ ಆಫೀಸರ್-2 ಸೇರಿ ಒಟ್ಟು ನಾಲ್ಕು ಹುದ್ದೆಗಳು ಖಾಲಿಯಿವೆ. ಅನುಕ್ರಮವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ರೆಸ್ಯೂಮ್ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ pe2section.dte@indiapost.gov.in ಗೆ ಡಿಸೆಂಬರ್ 12ಕ್ಕೂ ಮುನ್ನ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ ಆರಂಭ18-11-2022
ಅರ್ಜಿ ಸಲ್ಲಿಕೆ ಕೊನೆಯ ದಿನ12-12-2022
ಅರ್ಜಿ ಫಾರ್ಮ್ ಗಾಗಿಇಲ್ಲಿ ಕ್ಲಿಕ್ ಮಾಡಿ
ಉದ್ಯೋಗದ ಕುರಿತು ಇನ್ನಷ್ಟು ಮಾಹಿತಿಗಾಗಿಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಷನ್ ಫಾರ್ಮ್ ಹೀಗಿದೆ ನೋಡಿ

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version