ನದಿಗೆ ಜಿಗಿದು ಜಿಲ್ಲಾ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿ ಆತ್ಮಹತ್ಯೆ: ತಂದೆಯ ದೂರಿನಲ್ಲೇನಿದೆ?

ಕಾರವಾರ: ಜಿಲ್ಲಾ ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೋರ್ವ ಕಾಳಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಎನ್‌ಜಿಓ ಮುಖಾಂತರ ಪ್ರೊಜೆಕ್ಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀಕಾಂತ್ ಮೇಲಿನಮನೆ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ಕಾಳಿ ನದಿಯ ಸೇತುವೆ ಮೇಲೆ ಈತನ ಸ್ಕೂಟರ್ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ಮಾತುಗಳು ಕೇಳಿಬಂದಿದ್ದವು.

ಶಾಲಾ ಬಸ್ ಮತ್ತು ಲಗೇಜ್ ವಾಹನ ಮಧ್ಯೆ ಡಿಕ್ಕಿ: ನಡುರಸ್ತೆಯಲ್ಲಿ ಪಲ್ಟಿಯಾದ ಲಗೇಜ್ ವಾಹನ

ಅಧಿಕ ಕೆಲಸದ ಒತ್ತಡ ಹಾಗೂ ಮೇಲಾಧಿಕಾರಿಗಳ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ತಂದೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ತಾಲೂಕಿನ ಸುಂಕೇರಿಯ ಜಗತಕಟ್ಟಾ ಹತ್ತಿರದ ಕಾಳಿ ನದಿ ದಂಡೆಯ ಮೇಲೆ ಈತನ ಶವ ಪತ್ತೆಯಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version