ಕೆಟ್ಟುನಿಂತಿದ್ದ ಲಾರಿಯ ಹಿಂಭಾಗಕ್ಕೆ ಲಗೇಜ್ ವಾಹನ ಡಿಕ್ಕಿ: ಓರ್ವ ಸಾವು

ಕುಮಟಾ: ಕೆಟ್ಟುನಿಂತಿದ್ದ ಲಾರಿಯ ಹಿಂಭಾಗಕ್ಕೆ ಲಗೇಜ್ ವಾಹನ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಮಿರ್ಜಾನ್ ಬಳಿ ನಡೆದಿದೆ. ಧಾರವಾಡದಿಂದ ಕುಮಟಾಕ್ಕೆ ಬಿಸಿಎಮ್ ಹಾಸ್ಟೆಲ್ ಆಹಾರ ಸಾಮಗ್ರಿ ತರುತ್ತಿದ್ದ ಲಗೇಜ್ ಕ್ಯಾರಿಯರ್, ಅತೀ ವೇಗದಿಂದ ಬಂದು ಹಿಂಭಾಗಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಲಗೇಜ್ ಕ್ಯಾರಿಯರ್ ಸಹಾಯಕ ಧಾರವಾಡ ಮೂಲದ ಇಸ್ಮಯಲ್ ರೋಣದ್ ಸಾವು ಕಂಡಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version